ಮೇಲುಕೋಟೆ ಸಮಗ್ರ ಅಭಿವೃದ್ಧಿಗೆ ಮುಂದಾದವರು ಯಾರು ಗೊತ್ತಾ?

ಸೋಮವಾರ, 3 ಡಿಸೆಂಬರ್ 2018 (16:57 IST)
ಮೇಲುಕೋಟೆ ಅಭಿವೃದ್ಧಿಗೆ ಯೋಜನೆ ಸಿದ್ಧಪಡಿಸಲಾಗುತ್ತಿದೆ. ಸರಕಾರದ ಜೊತೆ ರಾಜ್ಯದ ಪ್ರಖ್ಯಾತ ಸಂಸ್ಥೆಯೂ ಅಭಿವೃದ್ಧಿಗೆ ಕೈಜೋಡಿಸಿದೆ.

ಮೇಲುಕೋಟೆಯಲ್ಲಿ ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಹೇಳಿಕೆ ನೀಡಿದ್ದು, ಮೇಲುಕೋಟೆ ಸಮಗ್ರ ಅಭಿವೃದ್ಧಿಗೋಸ್ಕರ ಇನ್ಫೋಸಿಸ್ ಸಂಸ್ಥೆ‌ ಮುಂದಾಗಿದೆ ಎಂದಿದ್ದಾರೆ.
ಪ್ರವಾಸೋದ್ಯಮ ಸಚಿವನಾಗಿ ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ ಅವರ ಈ ನಿರ್ಧಾರವನ್ನ ಸ್ವಾಗತಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ಮೇಲುಕೋಟೆಯಲ್ಲಿ 108 ಕೊಳಗಳಿವೆ. ಆದರೆ ನಮಗೆ ಕಾಣುತ್ತಿರುವುದು 65 ಕೊಳಗಳು ಮಾತ್ರ. ಪುರಾತತ್ವ ಇಲಾಖೆಯಿಂದ ಎಲ್ಲಾ ಕೊಳಗಳನ್ನು‌ ನವೀಕರಣಗೊಳಿಸುವ ಸಿದ್ಧತೆ ನಡೆದಿದೆ. ಇದೀಗ ಮೇಲುಕೋಟೆ ಅಭಿವೃದ್ಧಿ ವಿಚಾರವಾಗಿ ಒಂದು ಹಂತದ ಚರ್ಚೆ ನಡೆದಿದೆ ಎಂದಿದ್ದಾರೆ.
 ತಜ್ಞರ ವರದಿಯ ಪ್ರಕಾರ ಸರ್ಕಾರ‌ ಹಾಗೂ ಇನ್ಫೋಸಿಸ್ ಸಂಸ್ಥೆ ಮೇಲುಕೋಟೆ ಅಭಿವೃದ್ಧಿಗೆ ಯೋಜನೆ ಸಿದ್ಧಪಡಿಸಲಿದೆ.
ಲುಕೋಟೆ ಅಭಿವೃದ್ಧಿ ವಿಚಾರವಾಗಿ ಇನ್ಫೋಸಿಸ್ ಸಂಸ್ಥೆಗೆ ಸರ್ಕಾರ‌ ಎಲ್ಲಾ‌ ರೀತಿಯ ಸಹಾಯ ನೀಡಲಿದೆ ಎಂದರು.
ಮೇಲುಕೋಟೆ ಅಭಿವೃದ್ಧಿ ವಿಚಾರವಾಗಿ ತಜ್ಞರ ಅಂತಿಮ ವರದಿ ಬಂದ ಬಳಿಕ ಕ್ರಮಕ್ಕೆ ಮುಂದಾಗಲಾಗುತ್ತದೆ.

ಸಣ್ಣ ನೀರಾವರಿ ಇಲಾಖೆಯಿಂದ 30 ಕೋಟಿ ರೂ. ಮತ್ತು ಪ್ರವಾಸೋದ್ಯಮ ಇಲಾಖೆಯಿಂದ ಅಗತ್ಯವಿರುವ ಹಣ ಬಿಡುಗಡೆಯಾಗಲಿದೆ. ಇನ್ನುಳಿದಂತೆ ಉಳಿಕೆ ಹಣವನ್ನು ಇನ್ಫೋಸಿಸ್ ಸಂಸ್ಥೆ ನೀಡುವ ಭರವಸೆ ನೀಡಿದೆ ಎಂದು ಮಾಹಿತಿ ನೀಡಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ