ಬಿಜೆಪಿಯಲ್ಲಿ ಯಾರು ಯಾರಿಗೆ ಸಿಗುತ್ತೆ ಸಚಿವ ಸ್ಥಾನ?
ರಾಜ್ಯದ ಸಚಿವ ಸಂಪುಟ ವಿಸ್ತರಣೆ ಮತ್ತೆ ಬಿಸಿ ಬಿಸಿ ಚರ್ಚೆಗೆ ಕಾರಣವಾಗುತ್ತಿದೆ.
ಕೊರೊನಾ ವೈರಸ್ ನಿಂದ ಸಿಎಂ ಬಿ.ಎಸ್.ಯಡಿಯೂರಪ್ಪನವರು ಗುಣಮುಖರಾಗಿದ್ದರಿಂದಾಗಿ ರಾಜಕೀಯ ಚಟುವಟಿಕೆಗಳು ಬಿಜೆಪಿಯಲ್ಲಿ ಬಿರುಸುಗೊಂಡಿವೆ.
ಮೈತ್ರಿ ಸರಕಾರ ಪತನಕ್ಕೆ ಕಾರಣರಾದವರಿಗೆ ಸಚಿವ ಸ್ಥಾನದ ಭರವಸೆ ನೀಡಲಾಗಿತ್ತು. ಎಂಟಿಬಿ ನಾಗರಾಜು, ಆರ್. ಶಂಕರ್, ವಿಶ್ವನಾಥ್ ಹೆಸರು ಪ್ರಬಲವಾಗಿಕೇಳಿಬರುತ್ತಿದೆ.
ಇನ್ನು ಆಯಕಟ್ಟಿನ ಹುದ್ದೆಗೆ ಸಿ.ಪಿ. ಯೋಗೀಶ್ವರ್, ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಯತ್ನ ಮುಂದುವರಿಸಿದ್ದಾರೆ ಎನ್ನಲಾಗಿದೆ.