ಪಂಚ ರಾಜ್ಯಗಳ ಫೈಟ್‌ನಲ್ಲಿ ಯಾರಿಗೆ ಸಿಗಲಿದೆ ಗೆಲುವು....?

ಸೋಮವಾರ, 13 ನವೆಂಬರ್ 2023 (20:00 IST)
ಮುಂದಿನ ವರ್ಷವೇ ಡೆಲ್ಲಿಯ ಗದ್ದುಗೆಯನ್ನು ಯಾರು ಏರಬಹುದು ಎಂಬುದರ ಸ್ಪಷ್ಟ ಚಿತ್ರಣ ಸಿಗಲಿದೆ. ಆದರೆ ಅದಕ್ಕೂ ಮುನ್ನ ಈಗ ಎದುರಾಗ್ತಾ ಇರುವ ಪಂಚರಾಜ್ಯಗಳ ಚುನಾವಣಾ ಫಲಿತಾಂಶವೂ, ಏನಾಗಲಿದೆ ಎಂಬುದರ ಮೇಲೆ ೨೦೨೪ರಲ್ಲಿ ಶಕ್ತಿಕೇಂದ್ರದಲ್ಲಿ ಅಧಿಪತ್ಯವನ್ನು ಯಾರು ಸುಲಭವಾಗಿ ಸ್ಥಾಪಿಸಬಹುದು ಎಂಬುದಕ್ಕೆ ಒಂದು ಹಂತಕ್ಕೆ ಉತ್ತರ ಸಿಗಬಹುದು..

ಮೀಜೋರಂನ ಒಟ್ಟು ೪೦ ಅಸೆಂಬ್ಲಿ ಕ್ಷೇತ್ರಗಳಿಗೆ ಚುನಾವಣೆ ನಡೆದಿದೆ. ಆಕಡೆ ಛತ್ತಿಸ್‌ಘಡದಲ್ಲಿ, ೯೦ ವಿಧಾನಸಭಾಕ್ಷೇತ್ರಗಳಿಗೆ ಎಲೆಕ್ಷನ್ ನಡೆದು ಹೋಗಿದೆ. ಆ ಕಡೆ ಮಧ್ಯಪ್ರದೇಶದಲ್ಲಿ ಒಟ್ಟು ೨೩೦ ಅಸೆಂಬ್ಲಿ ಕ್ಷೇತ್ರಗಳಿಗೆ ಜಿದ್ದಾಜಿದ್ದಿನ ಚುನಾವಣಾ ಅಖಾಡ ರಂಗೇರಲಿದೆ. ಇನ್ನೂ ತೆಲಂಗಾಣದಲ್ಲಿ ೧೧೯ ಕ್ಷೇತ್ರಗಳಿಗೆ ಕಾಂಗ್ರೆಸ್ ಮತ್ತು ಬಿಆರ್‌ಎಸ್ ಪಾರ್ಟಿಗಳ ನಡುವೆ ನೇರಾನೇರಾ ಹಣಾಹಣಿ ಎದುರಾಗುವ ಸಾಧ್ಯತೆ ಹೆಚ್ಚಿದೆ. ಹಾಗೇ ಆ ಕಡೆಯ ರಾಜಸ್ತಾನದಲ್ಲಿ ೨೦೦ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಪ್ರಬಲ ಹೋರಾಟದ ಸ್ಪರ್ಧೆಯನ್ನು ನಿರೀಕ್ಷಿಸಲಾಗಿದೆ.
 
ಓಕೆ, ಚುನಾವಣೆಗೆ ಬಿಜೆಪಿ ಮತ್ತು ಕಾಂಗ್ರೆಸ್ ಪಾರ್ಟಿಗಳು ಜಿದ್ದಿಗೆ ಬಿದ್ದು, ಅಖಾಡಕ್ಕೆ ಇಳಿದು ಘರ್ಜಿಸಿವೆ. ಹಾಗಾದರೇ ಈ ಭಾರಿಯ ಪಂಚರಾಜ್ಯಗಳ ಚುನಾವಣಾ ಫೈಟ್‌ನಲ್ಲಿ ಯಾರಿಗೆ ಹೆಚ್ಚಿನ ಪ್ಲಸ್ ಪಾಯಿಂಟ್ ಆಗಬಹುದು, ಎಲೆಲ್ಲಿ ಯಾವ ಪಾರ್ಟಿ ಮೇಲುಗೈ ಸಾಧಿಸಬಹುದು. ಈ ಬಗ್ಗೆ ಚುನಾವಣಾ ಪೂರ್ವ ಸಮೀಕ್ಷೆಗಳು ಏನ್ ಹೇಳ್ತಿವೆ.. ಅನಾಯಾಸವಾಗಿ ಗೆಲುವಿನ ನಗೆ ಬೀರುವ ಲಕ್ಷಣಗಳು ಬಿಜೆಪಿಯ ಕಡೆಗಾ, ಅಥವಾ ಕಾಂಗ್ರೆಸ್‌ಗಾ...?
 
ಐದು ರಾಜ್ಯಗಳ ಚುನಾವಣೆಯನ್ನು ತುಂಬ ಗಂಭೀರ ಮತ್ತು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಕಾಂಗ್ರೆಸ್ ಮತ್ತು ಬಿಜೆಪಿ ಪಾರ್ಟಿಗಳು, ಶತಾಯಗತಾಯ ಪಂಚಕಜ್ಜಾಯವನ್ನು ಸ್ವೀಕರಿಸಲು ತುದಿಗಾಲಲ್ಲಿ ನಿಂತಿವೆ.. ಬಟ್ ಅಷ್ಟು ಸುಲಭವಾಗಿ ಯಾರ್ ಗೆಲ್ತಾರೆ ಅಂತ ಹೇಳೋದು ಕಷ್ಟವಾದರೂ, ಚುನಾವಣಾ ಪೂರ್ವ ಸಮೀಕ್ಷೆಗಳು ಕೊಟ್ಟ ವರದಿಗಳ ಪ್ರಕಾರ, ಒಂದಷ್ಟು ಸ್ಪಷ್ಟ ಚಿತ್ರಣಗಳು ಹೊರ ಬಿದ್ದಿವೆ..

ಹಲವು ಸಮೀಕ್ಷೆಗಳು ಐದು ರಾಜ್ಯಗಳಲ್ಲಿನ ಚುನಾವಣಾ ಪೂರ್ವ ಸಮೀಕ್ಷೆಯ ಬಗ್ಗೆ ಬೆಳಕನ್ನು ಚೆಲ್ಲಿದ್ದವು. ಅದರಲ್ಲಿ ಮುಖ್ಯವಾಗಿ ಬಹುತೇಕ ಸಮೀಕ್ಷೆಗಳು ಕಾಂಗ್ರೆಸ್ ಮತ್ತು ಬಿಜೆಪಿಯ ನಡುವೆ ಬಿಗ್‌ಫೈಟ್ ನಡೆಬಹುದು ಅನ್ನುವ ಚಿತ್ರಣವನ್ನು ಹೊರ ಹಾಕಿದರೇ, ಇನ್ನೂ ಕೆಲವು ಸಮೀಕ್ಷೆಗಳಲ್ಲಿ ಬಿಜೆಪಿಯನ್ನು ಮೀರಿಸಿ, ಕಾಂಗ್ರೆಸ್ ಹೆಚ್ಚಿನ ಸದ್ದು ಮಾಡುವ ಫಲಿತಾಂಶವನ್ನು ಕೊಡ್ತಾ ಇರೋದುಂಟು..?
 
ಹಾಗೇ ನೋಡಿದರೇ ತೆಲಂಗಾಣದಲ್ಲಿ ಬಿಆರ್‌ಎಸ್‌ಗೆ ಕಾಂಗ್ರೆಸ್ ತನ್ನ ಗ್ಯಾರಂಟಿ ದರ್ಬಾರ್‌ನ ಮೂಲಕವೇ ಟಫ್ ಫೈಟ್ ಕೊಡುವ ಜಿದ್ದಿಗೆ ಬಿದ್ದಿದೆ, ಅಲ್ಲಿಗೆ ಸಮೀಕ್ಷೆಗಳ ಲೆಕ್ಕಾಚಾರವೂ ಕೂಡ, ಈ ಭಾರೀ ಕೆಸಿಆರ್ ಪಾರ್ಟಿಗೆ ಭಾರೀ ಹಿನ್ನಡೆ ಆಗಬಹುದು ಅಂತ ಹೇಳಲಾಗ್ತಿದೆ. ಅಲ್ಲಿಗೆ ಕಾಂಗ್ರೆಸ್‌ನ ಉಚಿತ ಕೊಡುಗೆಗಳ ಅಬ್ಬರ, ಕರ್ನಾಟದಲ್ಲಿ ಬಂದ ರಿಸಲ್ಟೇ ತೆಲಂಗಾಣದಲ್ಲಿ ದೂಳೆಬ್ಬಿಸಬಹುದು...?
 
ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಕೂಡ ಕಾಂಗ್ರೆಸ್‌ಗೆ ಹೆಚ್ಚಿನ ಒಲವಿದೆ. ಬಹುತೇಕ ಸಮೀಕ್ಷೆಗಳು ಕಾಂಗ್ರೆಸ್‌ನ ಪರವಾಗಿ ರಿಪೋರ್ಟ್ ಕೊಟ್ಟರೂ, ಆ ಕಡೆ ರಾಜಸ್ಥಾನದಲ್ಲಿ ಕಾಂಗ್ರೆಸ್‌ಗಿAತಲೂ ಬಿಜೆಪಿಯ ಬಾವುಟ ಹಾರುವ ಸಂಭವ ಹೆಚ್ಚಿದೆ. ಯಾಕೆಂದರೆ ರಾಜಸ್ಥಾನ ಕಾಂಗ್ರೆಸ್‌ನ ಆಂತರಿಕ ಕಚ್ಚಾಟ, ಸಿಎಂ ಅಶೋಕ್ ಗೆಹ್ಲೋಟ್ ಮತ್ತು ಸಚಿನ್‌ಫೈಲಟ್ ನಡುವಿನ ಶಿತಲ ಸಮರ, ಈ ಭಾರಿ ಅಲ್ಲಿ ಬಿಜೆಪಿಗೆ ಫ್ಲಸ್ ಆಗುವ ಎಲ್ಲಾ ಸಾಧ್ಯತೆಗಳು ಗೋಚರಿಸಿವೆ..?
 
ಅದೇ ರೀತಿಯಾಗಿ ಛತ್ತಿಸ್‌ಘಡದಲ್ಲಿ ಈಗಾಗಲೇ ಚುನಾವಣೆ ಮುಗಿದಿದೆ. ಆದರೂ ಚುನಾವಣಾ ಪೂರ್ವ ಸಮೀಕ್ಷೆಗಳ ಹೂರಣ ಮತ್ತೇ ಆಡಳಿತರೂಢ ಕಾಂಗ್ರೆಸ್ ಪಾರ್ಟಿಯೇ ಅಧಿಕಾರದ ಗದ್ದುಗೆಯನ್ನು ಅನಾಯಾಸವಾಗಿ ಏರಬಹುದು ಅನ್ನುತ್ತಿವೆ.. ಇನ್ನೂ ಆ ಕಡೆ ಮೀಜೋರಂನಲ್ಲಿ ಕೂಡ ೪೦ ಕ್ಷೇತ್ರಗಳಿಗೆ ಚುನಾವಣೆ ನಡೆದಿದೆ. ಇಲ್ಲಿಯೂ ಕೂಡ ಚುನಾವಣಾ ಪೂರ್ವ ಸಮೀಕ್ಷೆಯಂತೆ, ಅತಂತ್ರ ಫಲಿತಾಂಶ ಬಂದರೂ ಅಚ್ಚರಿಯಿಲ್ಲ....

ಪಂಚರಾಜ್ಯಗಳ ಚುನಾವಣಾ ಕಣದಲ್ಲಿ ಎಲೆಕ್ಷನ್ ಭರಾಟೆ ಜೋರಾಗಿಯೇ ನಡೆಯುತ್ತಿದೆ. ಹಾಗಾಂತ ಚುನಾವಣಾ ಪೂರ್ವ ಸಮೀಕ್ಷೆಗಳು ಹೇಳಿದ್ದೆಲ್ಲಾ ನಿಜವಾಗುತ್ತೆ ಅಂತ ಹೇಳೊದಕ್ಕೆ ಸಾಧ್ಯವಿಲ್ಲ. ಬಟ್ ಬಹುತೇಕವಾಗಿ ಚುನಾವಣಾ ಪೂರ್ವ ಸಮೀಕ್ಷೆಗಳ ಲೆಕ್ಕಾಚಾರಗಳು ಅಕ್ಷರಶಃ ನಿಖರ ಫಲಿತಾಂಶವನ್ನು ನೀಡಿದಿರೋದು ಕಣ್ಣ ಮುಂದಿದೆ. ಹಾಗಾಂತ ಈ ಭಾರೀಯ ಬಹುತೇಕ ಸಮೀಕ್ಷೆಗಳು ಕೊಟ್ಟ ವರದಿಗಳನ್ನು ನೋಡಿದರೇ, ಕಾಂಗ್ರೆಸ್ ಮತ್ತು ಬಿಜೆಪಿಯ ಮಧ್ಯೆ ಒಂದೆರಡು ರಾಜ್ಯಗಳಲ್ಲಿ ಬಿಗ್‌ಫೈಟ್ ನಡೆಯೊದನ್ನು ತಳ್ಳಿ ಹಾಕುವಂತಿಲ್ಲ.
 
ಬಿಜೆಪಿಗೆ ಅದರಲ್ಲೂ ಎನ್‌ಡಿಎ ಮೈತ್ರಿಕೂಟಕ್ಕೆ ೨೦೨೪ರ ಚುನಾವಣೆಯನ್ನು ಎದುರಿಸಲು, ಈ ಐದು ರಾಜ್ಯಗಳ ಚುನಾವಣೆಯೇ ಪ್ರಮುಖ ಘಟ್ಟವಾಗಲಿದೆ. ಬರೀ ಬಿಜೆಪಿಗೆ ಮಾತ್ರವಲ್ಲ, ಆ ಕಡೆ ಕಾಂಗ್ರೆಸ್ ನೇತೃತ್ವದ ಇಂಡಿಯಾ ಕೂಟಕ್ಕೂ ಈ ಪಂಚರಾಜ್ಯಗಳ ಚುನಾವಣೆಯೇ ಸೆಮಿಫೈನಲ್ ಮ್ಯಾಚ್... ಹಾಗಾಗಿ ತುಂಬಾ ಎಫರ್ಟ್ ಹಾಕಿಯೇ, ಬಿಜೆಪಿ ಮತ್ತು ಕಾಂಗ್ರೆಸ್ ಚುನಾವಣೆಯ ಅಖಾಡಕ್ಕೆ ಇಳಿದು ಬಿಟ್ಟಿವೆ...

ಲೋಕಸಭಾ ಎಲೆಕ್ಷನ್ಗೂ ಈಗ ನಡೆಯುತ್ತಿರುವ ಇರುವ ಐದು ರಾಜ್ಯಗಳ ಎಲೆಕ್ಷನ್‌ಗೂ ಬೇಜಾನ್ ವ್ಯಾತ್ಯಾಸವಿದೆ. ಹಾಗೆ ನೋಡಿದರೆ, ಮತದಾರರು ಲೋಕಸಭಾ ಎಲೆಕ್ಷನ್‌ನನ್ನು ದೃಷ್ಟಿಯಲ್ಲಿಟ್ಟುಕೊಂಡೆ, ಅಸೆಂಬ್ಲಿಗೆ ವೋಟ್ ಹಾಕ್ತಾರೆ ಅನ್ನೋದು ದಡ್ಡತನ. ಯಾಕಂದರೇ ಇದುವರೆಗೂ ಈ ಹಿಂದೆ ಅಂದರೆ ೨೦೧೯ರ ಪಾರ್ಲಿಮೆಂಟ್ ಚುನಾವಣೆಗೂ ಮುನ್ನ ಕೆಲವೊಂದು ರಾಜ್ಯಗಳಲ್ಲಿ ಬಿಜೆಪಿಗೆ ನಿರೀಕ್ಷಿತವಾದ ಫಲಿತಾಂಶ ಸಿಕ್ಕಿರಲಿಲ್ಲ, ಆದರೆ ಲೋಕಸಭಾ ಎಲೆಕ್ಷನ್‌ನಲ್ಲಿ ಯಾರು ಕೂಡ ಊಹಿಸದ ರೀತಿಯಲ್ಲಿ ನಮೋವಿನ ಪ್ರಚಂಡ ಅಲೆಗೆ, ಕಾಂಗ್ರೆಸ್ ಮತ್ತು ಇನ್ನಿತರೆ ಪಾರ್ಟಿಗಳು ಧೂಳಿಪಟವಾಗಿದ್ದವು. ಸದ್ಯ ಈಗ ಮತ್ತದೇ ಪರಿಸ್ಥಿತಿ ಅಂತದ್ದೇ, ಹಿನ್ನಡೆಯ ಭೀತಿಯಲ್ಲಿ ಬಿಜೆಪಿಯೂ ಚುನಾವಣಾ ಅಖಾಡಕ್ಕೆ ಇಳಿದಿದೆ.. 
 
ಬಿಜೆಪಿಗೆ ಕರ್ನಾಟಕ, ಮತ್ತು ಹಿಮಾಚಲದಂತೆಯೇ ಖೆಡ್ಡಾ ರೆಡಿ ಮಾಡಿ ವೇಯ್ಟ್ ಮಾಡ್ತಿದೆ ಕಾಂಗ್ರೆಸ್. ಯಾಕಂದರೇ ದೇಶದಲ್ಲಿ ಬಿಜೆಪಿಗೆ ಮೊದಲಿನಂತೆ ಅಧಿಕಾರವನ್ನು ಹಿಡಿಯುವ ಅಸಲಿ ಚಾರ್ಮ್ ಕಳೆದು ಹೋಗಿದೆ. ಮೋದಿ ಮತ್ತು ಶಾ, ಅದೆಷ್ಟೇ ಪ್ರಚಂಡ ಚುನಾವಣಾ ರ‍್ಯಾಲಿಗಳನ್ನು ಮಾಡಿ ಬಂದರೂ, ಅಂದುಕೊAಡ ನಿರೀಕ್ಷಿತ ಫಲಿತಾಂಶ ಸಿಗುತ್ತಿಲ್ಲ..?

ಪಂಚಫೈಟ್‌ನಲ್ಲಿ ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಆಗಲೇ ಹೇಳಿದಂತೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಒಂದು ಹಂತದ ನೇರಾನೇರಾ ಹಣಾಹಣಿ ಎದುರಾಗಬಹುದು, ಆದರೂ ಸಮೀಕ್ಷೆಗಳ ಲೆಕ್ಕಾಚಾರ, ಕಡೆ ಆಟದಲ್ಲಿ ಬಿಜೆಪಿಗೆ ಮಧ್ಯಪ್ರದೇಶ ಕೈ ತಪ್ಪಿ ಹೋಗುವ ಆತಂಕ ಹೆಚ್ಚಾಗಿಯೇ ಇದೆ. ಇಲ್ಲಿ ಈ ಹಿಂದೆ ಕಮಲನಾಥ್ ಸರ್ಕಾರವನ್ನು, ಆಪರೇಷನ್ ಕಮಲ ಮಾಡಿ ಹಿಂಬಾಗಿಲಿನಿAದ ಅಧಿಕಾರಕ್ಕೇರಿದ್ದ ಬಿಜೆಪಿಗೆ, ಮಧ್ಯಪ್ರದೇಶದ ಮತದಾರ ಚಾಟೀ ಬೀಸಿ, ಅನುಕಂಪದ ಅಲೆಯಲ್ಲಿ ಕೈಗೆ ಗದ್ದುಗೆಯನ್ನು ನೀಡಬಹುದು..?
 
ಆದರೆ ಕಾಂಗ್ರೆಸ್‌ಗೆ ಮಧ್ಯಪ್ರದೇಶದಲ್ಲಿ ಎಲ್ಲಾ ಆಂಗಲ್‌ನಿAದಲೂ ನೋಡಿದರೂ, ಈ ಭಾರೀ ಅಧಿಕಾರದ ಸನಿಹಕ್ಕೆ ಬಂದು ನಿಲ್ಲೋದು ಬಹುತೇಕ ನಿಕಿ ಎನ್ನಲಾಗ್ತಿದೆ. ಆದರೂ ಮೋದಿ ಮತ್ತು ಚಾಣಕ್ಯ ಅಮಿತ್ ಶಾ ಲೆಕ್ಕಾಚಾರ ಏನದರೂ ನಡೆದು ಬಿಟ್ಟರೇ, ಕಡೆಯ ಆಟದಲ್ಲಿ ಬಿಜೆಪಿಗೆ ಲಡ್ಡು ಬಂದು ಬಾಯಿಗೆ ಬೀಳಬಹುದು..? ಬಟ್ ಕಾಂಗ್ರೆಸ್‌ಗೆ ಬಹುತೇಕ ಅಧಿಕಾರ ಹಿಡಿಯುವ ಹೋಪ್ ಇದ್ದರೂ, ಬಿಜೆಪಿಯ ಚುನಾವಣ ಗೆಲ್ಲುವ ತಂತ್ರಗಾರಿಗೆ ಎಲ್ಲವನ್ನೂ ತಿರುಗ ಮರುಗ ಮಾಡಿದರೂ ಅಚ್ಚರಿಯಿಲ್ಲ. ಬಟ್ ಅದೇನೇ ಇದ್ದರೂ ಮಧ್ಯಪ್ರದೇಶದಲ್ಲಿನ ಚಿತ್ರಣ ಮಧ್ಯಂತರದಲ್ಲಿಯೇ ಇದೆ ಎನ್ನಬಹುದು.?
 
ಇನ್ನೂ ರಾಜಸ್ಥಾನದಲ್ಲಿ ಕಾಂಗ್ರೆಸ್‌ಗೆ ಮತ್ತೆ ಇನ್ನೊಂದು ಅವಧಿಗೆ ಗೆಲ್ಲುವ ಆಸೆ ಇದ್ದರೂ, ಆಡಳಿತದಲ್ಲಿನ ಹಲವು ಒಳಬೇಗುದಿಗಳ ರಾಜಕಾರಣದ ಕಾರಣಕ್ಕೆ, ಏನಾಗುತ್ತೋ ಅನ್ನುವ ಆತಂಕ ಎದ್ದು ಕಾಡ್ತಿದೆ. ಆದರೆ ಬಿಜೆಪಿಗೆ ಇದೇ ಅಸ್ತçವನ್ನು ಲಾಭ ಮಾಡಿಕೊಳ್ಳುವ ಅವಕಾಶವಿದ್ದರೂ, ವಸುಂದರೇ ರಾಜೇಯ ಮುನಿಸಿನ ರಾಜಕಾರಣ, ಮೋದಿ ಮತ್ತು ಶಾ ನಿದ್ದೆಯನ್ನು ಕೆಡಿಸಿದೆ. ಅಲ್ಲಿಗೆ ಬಿಜೆಪಿಗೆ ರಾಜಸ್ಥಾನ ಸಿಗಬೇಕಾದರೇ, ಒಂದಷ್ಟು ವಿಭಿನ್ನ ಎಫರ್ಟ್ ಹಾಕಲೇಬೇಕು..?

ತೆಲಂಗಾಣದಲ್ಲಿ ಒಟ್ಟು ೧೧೯ ಅಸೆಂಬ್ಲಿ ಕ್ಷೇತ್ರಗಳು ಇವೆ. ಇದೇ ತಿಂಗಳು ೩೦ಕ್ಕೆ ಇಲ್ಲಿ ಚುನಾವಣೆ ಎದುರಾಗ್ತಾ ಇದೆ. ಹಾಗೇ ನೋಡಿದರೆ ಹಾಲಿ ಇರುವ ಕೆಸಿಆರ್ ಸರ್ಕಾರ, ಈ ಭಾರಿ ಕಾಂಗ್ರೆಸ್ಸಿನ ಅಲೆಯ ಮುಂದೇ ಅಷ್ಟು ಸುಲಭವಾಗಿ ಮತ್ತೆ ಅಧಿಕಾರವನ್ನು ಪಡೆಯಲಿದೆ ಅನ್ನೋದು ದೂರದ ಮಾತು. ಏಕೆಂದರೆ ಚುನಾವಣಾ ಪೂರ್ವ ಸಮೀಕ್ಷೆಗಳ ಪ್ರಕಾರ, ಈ ಭಾರೀ ಕಾಂಗ್ರೆಸ್‌ಗೆ ಗೆಲುವಿನ ಪಟ್ಟ ಸಿಗಬಹುದು ಅಂತ ಹೇಳಲಾಗ್ತಿದೆ. ಬೈ ಚಾನ್ಸ್ ಹಾಗೋ ಹೀಗೋ ಏರುಪೇರಾದರೇ, ಅತಂತ್ರ ಫಲಿತಾಂಶ ನಿರ್ಮಾಣವಾಗಬಹುದು..? ಆದರೆ ತೆಲಂಗಾಣದಲ್ಲಿ ಮೋದಿ ಮತ್ತು ಅಮಿತ್ ಶಾ ಅದೆಷ್ಟೇ ತಿಪ್ಪರಲಾಗ ಹಾಕಿದರೂ  ಬಿಜೆಪಿಯನ್ನು ಅಧಿಕಾರಕ್ಕೆ ತಂದೂ ನಿಲ್ಲಿಸೋದು ಕನಸ್ಸಿನಲ್ಲಿಯೂ ಆಗದ ಮಾತು...?
 
ಬಿಜೆಪಿಗೆ ಈಗ ಪಂಚರಾಜ್ಯಗಳ ಚುನಾವಣೆಯನ್ನು ಗೆಲ್ಲೋದು ಸವಾಲು ಮತ್ತು ಅಗ್ನಿಪರೀಕ್ಷೆಯಾಗಿದೆ. ಇನ್ನೇನು ಇದು ಮುಗಿದ ನಂತರ ೨೦೨೪ರಲ್ಲಿ ಲೋಕಸಭಾ ಚುನಾವಣೆ ಎದುರಾಗ್ತಿದೆ. ಹಾಗಾಗಿ ಮೋದಿಗೆ ಮೂರನೇ ಅವಧಿಗೆ ಡೆಲ್ಲಿಯ ಗದ್ದುಗೆಯನ್ನು ಹಿಡಿಯಬೇಕಾದರೇ, ಈ ಪಂಚರಾಜ್ಯಗಳ ಚುನಾವಣೆಯೇ ಓಂಥಾರಾ ಸೆಮಿಫೈನಲ್ ಮ್ಯಾಚ್.

ಯೆಸ್.. ದೇಶದಲ್ಲಿ ಹಂತ ಹಂತವಾಗಿ ಕಾಂಗ್ರೆಸ್ ಚೇತರಿಸಿಕೊಳ್ಳುತ್ತಿರುವುದನ್ನು ನೋಡಿದರೆ ಮೋದಿ ಮತ್ತು ಅಮಿತ್‌ಶಾ ಅದೇನೆ ರ‍್ಯಾಲಿ, ಪ್ರಚಾರ, ಭಾಷಣಗಳನ್ನು ಮಾಡಿದರೂ ಅದೊಂದು ಲೆಕ್ಕಾನಾ ಅನ್ನುವ ಫಿಲ್‌ನಲ್ಲಿ ಚುನಾವಣಾ ಅಖಾಡದಲ್ಲಿ ಸದ್ದು ಮಾಡ್ತಿದೆ. ಪ್ರಿಯಾಂಕಾ ವಾದ್ರಾ, ರಾಹುಲ್‌ಗಾಂಧಿ ಮೋದಿ ಹೋಗಿ ಬಂದ ಕಡೆಯೆಲ್ಲಾ ಹೋಗಿ ಬಂದು ಸಖತ್ತಾಗಿಯೇ ಪಂಚಿAಗ್ ಡೈಲಾಗ್ ಹೊಡೆದು, ಬಿಜೆಪಿಗೆ ಟಾಂಗ್ ಕೊಟ್ಟಾಗಿದೆ.

ಹಿಮಾಚಲ, ಕರ್ನಾಟಕದಂತೆ, ಈ ಕಡೆ ಪಂಚರಾಜ್ಯಗಳ ಚುನಾವಣೆಯಲ್ಲೂ ಕಾಂಗ್ರೆಸ್‌ಗೆ ಎರಡು ಅಥವಾ ಮೂರು ರಾಜ್ಯಗಳಲ್ಲಿ, ಸುಲಭವಾಗಿ ಅಧಿಕಾರವನ್ನು ರಚಿಸುವ ಅವಕಾಶ ಹೆಚ್ಚಿದೆ ಅನ್ನೋದು ಸಮೀಕ್ಷೆಗಳಿಂದ ಗೊತ್ತಾಗ್ತಿದೆ. ಬಹುಶಃ ಈ ಸಮೀಕ್ಷೆಗಳ ಲೆಕ್ಕಚಾರವೇ ಬಿಜೆಪಿಗೆ ದೊಡ್ಡ ಆತಂಕವನ್ನು ತಂದಿಟ್ಟಿದೆ... 
 
ಶತಯಗತಾಯ ಪಂಚ ಫೈಟ್‌ನಲ್ಲಿ ಗೆದ್ದು ಬೀಗುವ ಹುಮ್ಮಸ್ಸು, ಹಠ ಕಾಂಗ್ರೆಸ್‌ಗೆ ಇದೆ. ಹಾಗೇ ಸದ್ಯದ ಪರಿಸ್ಥಿತಿಯ ಆಯಾ ರಾಜ್ಯಗಳ ಮತದಾರನ ನಾಡಿಮಿಡಿತವನ್ನು ಗಮನಿಸಿದಾಗ, ಅದು ನೇರವಾಗಿ ಗೊತ್ತಾಗುತ್ತಿದೆ ಕೂಡ. ಆದರೆ ಈ ಕಡೆಗೆ ಬಿಜೆಪಿಗೆ ಕಾಡ್ತಾ ಇರುವ ಭಯ ಏನಂದ್ರೆ,  ಕಾಂಗ್ರೆಸ್ ಏನಾದರೂ, ಪಂಚ ರಾಜ್ಯಗಳ ಚುನಾವಣೆಯಲ್ಲಿ ಮರ‍್ನಾಕ್ಕು ರಾಜ್ಯಗಳನ್ನು ಗೆದ್ದು ಬಿಟ್ಟರೇ, ಮುಂಬರುವ ಲೋಕಸಭಾ ಚುನಾವಣೆಯ ಹೊತ್ತಿಗೆ, ಇಂಡಿಯಾಮೈತ್ರಿಕೂಟವನ್ನು ಇನ್ನಷ್ಟು ಪ್ರಬಲಗೊಳಿಸುವ ಆತ್ಮವಿಶ್ವಾಸ ಸಹಜವಾಗಿಯೇ ಬಂದು ಬಿಡುತ್ತೆ. ಆಗ ಮೋದಿಯಲ್ಲ, ಆ ದೇವರೇ ಬಂದರೂ, ಡೆಲ್ಲಿಯ ಚುನಾವಣೆಯಲ್ಲಿ ಎನ್‌ಡಿಎ ಕೂಟ, ಅಂದುಕೊAಡ ದಿಗ್ವಿಜಯ ಸಾಧಿಸಲಾಗದು..? ಸ್ವಲ್ಪ ಯಾಮಾರಿದರೂ, ಮೂರನೇ ಅವಧಿಗೆ ಮೋದಿ ಬರ್ತಾರಾ...?
 
ದೇಶದಲ್ಲಿನ ಹೊಸ ರಾಜಕೀಯ ಬದಲಾವಣೆಗೆ ಇದೇ ಪಂಚರಾಜ್ಯಗಳ ಚುನಾವಣೆಯ ಫಲಿತಾಂಶ ಹೊಸ ಮುನ್ನುಡಿಯನ್ನ ಬರೆಯಬಹುದು. ಯಾಕೆಂದರೆ ಮತದಾರ ಮೊದಲಿನಂತೆ ಬರೀ ಭಾವನಾತ್ಮಕ ವಿಚಾರಗಳಿಗೆ ವೋಟ್ ಹಾಕ್ತಾರೇ ಅನ್ನುವ ಜಾಯಮಾನವಿಗೀಲ್ಲ. ಅಭಿವೃದ್ದಿ, ಅಭ್ಯರ್ಥಿಗಳ ವರ್ಚಸ್ಸು, ಎಲ್ಲವನ್ನೂ ಗಮನಿಸಿಯೇ ಬೆರಳ ತುದಿಗೆ ಕೆಲಸ ಕೊಡ್ತಾರೆ.. ಮೋದಿ, ರಾಹುಲ್, ಪ್ರಿಯಾಂಕ, ಚೌಹಣ್, ಕೆಸಿಆರ್, ಹೀಗೆ ಯಾರೇ ಬಂದೂ ಒಂದೇರಡು ಮಾತು, ನಾಲ್ಕು ರ‍್ಯಾಲಿ ಮಾಡಿ ಬಿಟ್ಟರೇ ಗೆದ್ದಂತೆ ಅಲ್ಲ..? ಫೈನಲ್ ರಿಸಲ್ಟ್ ಹೇಗಿರೋತ್ತೋ, ಅನ್ನೋದು ಡಿಸೆಂಬರ್ ೩ರ ನಂತರವಷ್ಟೇ ಹೊರ ಬೀಳಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ