ಪ್ರಿಯಾಂಕಾ ಖರ್ಗೆಗೆ ಯಾಕೆ ಶಾಸಕ ಸ್ಥಾನ ಕೊಟ್ಟಿದ್ದು?: ಸೋಮಶೇಖರ್

ಭಾನುವಾರ, 19 ಜೂನ್ 2016 (17:09 IST)
ಮೊದಲ ಬಾರಿ ಆಯ್ಕೆಯಾದ ಪ್ರಿಯಾಂಕಾ ಖರ್ಗೆಗೆ ಯಾಕೆ ಸಚಿವ ಸ್ಥಾನ ನೀಡಿದ್ದು, ನನಗೆ ಯಾಕೆ ಸಚಿವ ಸ್ಥಾನ ನೀಡಿಲ್ಲ ಎಂದು ಶಾಸಕ ಎಸ್.ಟಿ.ಸೋಮಶೇಖರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ಆರಂಭದಲ್ಲಿ ಮೊದಲ ಬಾರಿಗೆ ಗೆದ್ದವರಿಗೆ ಸಚಿವ ಸ್ಥಾನ ನೀಡುವುದಿಲ್ಲ ಎಂದು ಹೇಳಲಾಗಿತ್ತು. ಇದೀಗ, ಮೊದಲ ಬಾರಿಗೆ ಗೆದ್ದ ಪ್ರಿಯಾಂಕಾ ಖರ್ಗೆಗೆ ಯಾಕೆ ಸಚಿವ ಸ್ಥಾನ ನೀಡಲಾಗಿದೆ. ನಮಗ್ಯಾಕೆ ಸಚಿವ ಸ್ಥಾನ ನೀಡಿಲ್ಲ ಎಂದು ಪ್ರಶ್ನಿಸಿದರು.
 
ಕಾಂಗ್ರೆಸ್ ಪಕ್ಷದ ಎಂಟು ಶಾಸಕರು ಸಭೆ ಸೇರಿ ಚರ್ಚಿಸುತ್ತಿದ್ದು ಶಾಸಕ ಸ್ಥಾನಕ್ಕೆ ಮತ್ತು ಪಕ್ಷಕ್ಕೆ ರಾಜೀನಾಮೆ ನೀಡುವ ಕುರಿತಂತೆ ಚರ್ಚೆ ನಡೆಸುತ್ತಿದ್ದೇವೆ. ನಾಳೆ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಗುಡುಗಿದ್ದಾರೆ.
 
ಕಾಂಗ್ರೆಸ್ ಪಕ್ಷದ ಪ್ರತಿಯೊಂದು ಕೆಲಸಗಳಿಗೆ ನಾವು ಬೇಕು. ಆದರೆ, ಸಚಿವ ಸ್ಥಾನ ಮಾತ್ರ ಬೇರೆಯವರಿಗೆ ನೀಡಿದರೆ ಹೇಗೆ ಎಂದು ಶಾಸಕ ಸೋಮಶೇಖರ್ ಕಿಡಿಕಾರಿದ್ದಾರೆ.
 
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ