ಮನೆಗೆ ದೃಷ್ಟಿಯಾಗಿದ್ದರೆ ಪ್ರತಿ ಶನಿವಾರ ನಿಂಬೆಹಣ್ಣಿನಿಂದ ಹೀಗೆ ಮಾಡಿ

ಸೋಮವಾರ, 19 ಆಗಸ್ಟ್ 2019 (08:54 IST)
ಬೆಂಗಳೂರು : ಕೆಲವೊಮ್ಮೆ ಹೊರಗಿನಿಂದ ಬಂದವರು ಮನೆಯ ಮೇಲೆ ದೃಷ್ಟಿ ಹಾಕುತ್ತಾರೆ. ಇದರಿಂದ ಮನೆಯಲ್ಲಿ ಯಾವಾಗಲೂ ಅನಾಹುತಗಳು, ಸಮಸ್ಯೆಗಳು ಸಂಭವಿಸುತ್ತಿರುತ್ತದೆ. ಆದ್ದರಿಂದ ಈ ದೃಷ್ಟಿ ದೋಷವನ್ನು ನಿವಾರಿಸಲು ನಿಂಬೆ ಹಣ್ಣಿನಿಂದ ಪ್ರತಿ ಶನಿವಾರ ಹೀಗೆ ಮಾಡಿ.ನಿಂಬೆಹಣ್ಣನ್ನು ಕತ್ತರಿಸಿ ಅದಕ್ಕೆ ಅರಶಿನ ಕುಂಕುಮವನ್ನು ಹಚ್ಚಿ ಅದನ್ನು ಮನೆಯ ಬಾಗಿಲಿಗೆ ಇಡಬೇಕು.  ಇನ್ನೊಂದು ನಿಂಬೆ ಹಣ್ಣನ್ನು ಒಂದು ಗಾಜಿನ ಲೋಟಕ್ಕೆ ನೀರು ಹಾಕಿ ಇಡಬೇಕು. ಈ ನಿಂಬೆಹಣ್ಣು ನೀರಿನೊಳಗೆ ಮುಳುಗಿದರೆ ಮನೆಗೆ ಯಾವುದೇ ದೃಷ್ಟಿ ದೋಷ ಇಲ್ಲ ಎಂದರ್ಥ.

 

ಒಂದು ವೇಳೆ ನಿಂಬೆ ಹಣ್ಣು 3-4 ದಿನದಲ್ಲಿ ಮೇಲೆ ನೀರಿನ ತೇಲಿದರೆ ಅಥವಾ ಕೊಳೆತರೆ ಆ ಮನೆಗೆ ದೃಷ್ಟಿಯಾಗಿದೆ ಎಂದರ್ಥ. ಆದಕಾರಣ ಆ ನಿಂಬೆ ಹಣ್ಣನ್ನು ಬದಲಿಸುತ್ತಾ ಇರಿ. ಹಾಗೇ ಈ ನಿಂಬೆ ಹಣ್ಣಿನ ಗ್ಲಾಸ್ ನ್ನು ಎಲ್ಲರಿಗೂ ಕಾಣುವ ಹಾಗೇ ದೇವರ ಫೋಟೊದ ಮುಂದೆ ಇಡಬೇಕು. ಹೀಗೆ ಮಾಡುತ್ತಾ ಬಂದರೆ ಮನೆಗೆ ತಗುಲಿದ ದೃಷ್ಟಿದೋಷ ನಿವಾರಣೆಯಾಗುತ್ತದೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ