ಕೊನೆಗೂ ಸಚಿವ ಸಂಪುಟ ಪ್ರಕ್ರಿಯೆ ಪೂರ್ಣಗೊಳಿಸಿದ ಸಿಎಂ ಯಡಿಯೂರಪ್ಪ

ಭಾನುವಾರ, 18 ಆಗಸ್ಟ್ 2019 (11:01 IST)
ಬೆಂಗಳೂರು : ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಬಿಎಸ್ ಯಡಿಯೂರಪ್ಪ ಅವರು ವಿರೋಧ ಪಕ್ಷಗಳ ಟೀಕೆಗಳ ನಡುವೆ ರಾಜ್ಯ ಸಂಪುಟ ರಚನೆ ಕಸರತ್ತು ಪೂರ್ಣಗೊಳಿಸಿದ್ದಾರೆ.
ದೆಹಲಿಯಲ್ಲಿ ಅಮಿತ್ ಶಾ ಅವರ ಜೊತೆ ಚರ್ಚಿಸಿ ಮತ್ತೆ ಬೆಂಗಳೂರಿಗೆ ವಾಪಾಸಾದ  ಸಿಎಂ ಬಿಎಸ್​ ಯಡಿಯೂರಪ್ಪ ಅವರು  ಮಾಧ್ಯಮದ ಜೊತೆ ಮಾತನಾಡಿ, ಸಚಿವ ಸಂಪುಟ ಪ್ರಕ್ರಿಯೆ ಪೂರ್ಣಗೊಂಡಿರುವುದಾಗಿ ತಿಳಿಸಿದ್ದಾರೆ.


'ಸೋಮವಾರ ಮಧ್ಯಾಹ್ನ ಕ್ಯಾಬಿನೆಟ್​ನಲ್ಲಿ ಯಾರೆಲ್ಲಾ ಇರಲಿದ್ದಾರೆ ಎಂಬುದು ಫೈನಲ್ ಆಗಲಿದೆ. ಮಂಗಳವಾರ 3-4 ಗಂಟೆ ಹೊತ್ತಿಗೆ ಸಂಪುಟ ರಚನೆ ಆಗಲಿದೆ. ಮೊದಲ ಹಂತದಲ್ಲಿ 13-14 ಸಚಿವರು ಸಂಪುಟ ಸೇರಿಕೊಳ್ಳಲಿದ್ದಾರ ಎಂದು ಅವರು ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ