ವಿಧಾನಸಭೆ ಕಲಾಪಕ್ಕೆ ಬರಲು ಸಿಎಂ ತಡಮಾಡಿದ್ದೇಕೆ? ಶಾಕಿಂಗ್

ಮಂಗಳವಾರ, 23 ಜುಲೈ 2019 (16:44 IST)
ವಿಶ್ವಾಸಮತ ಮೇಲಿನ ಚರ್ಚೆ ಕೊನೆಗೊಳಿಸಲು ಹಾಗೂ ಬಹುಮತ ಸಾಬೀತು ಪಡಿಸಲು ಸ್ಪೀಕರ್ ಡೆಡ್ ಲೈನ್ ನೀಡಿದ್ದರೂ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಲಾಪಕ್ಕೆ ತಡವಾಗಿ ಆಗಮಿಸಿದ್ದರ ಕುರಿತು ಚರ್ಚೆಗಳು ಶುರುವಾಗಿವೆ.

ವಿಧಾನಸಭೆಗೆ ಕುಮಾರಸ್ವಾಮಿ ನಾಲ್ಕೈದು ಗಂಟೆಗಳ ಕಾಲ ತಡವಾಗಿ ಆಗಮಿಸಿದ್ರು.  ಮಧ್ಹಾಹ್ನ 3 ಗಂಟೆಗೆ ವಿಧಾನಸಭೆ ಸಿಎಂ ಕಾಲಿಟ್ಟರು.

ಬೆಳಗ್ಗೆಯಿಂದ ಹೋಟೆಲ್ ತಾಜ್ ವೆಸ್ಟೆಂಡ್ ನಲ್ಲಿದ್ದ ಸಿಎಂ, ರಾಜಕೀಯ ಲೆಕ್ಕಾಚಾರದಲ್ಲಿ ಮುಳುಗಿದ್ರು. ಅವರನ್ನ ಎಂ.ಬಿ.ಪಾಟೀಲ್, ಡಿ.ಕೆ.ಶಿವಕುಮಾರ್ ಭೇಟಿ ಮಾಡಿ ಬಂದಿದ್ದರು.  

ತಾಜ್ ವೆಸ್ಟೆಂಡ್ ಹೋಟೆಲ್ ನಲ್ಲಿ ಪ್ರಮುಖರೊಂದಿಗೆ ಸಿಎಂ ಮುಂದಿನ ರಾಜಕೀಯ ನಡೆ ಹಾಗೂ ತೀರ್ಮಾನಗಳ ಬಗ್ಗೆ ಗಂಭೀರವಾಗಿ ಚರ್ಚೆಯಲ್ಲಿ ತೊಡಗಿದ್ದರು ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ