ಜನರಲ್ಲಿ ಪ್ರಕಾಶ್ ರೈ ಕ್ಷಮೆ ಕೇಳಿದ್ದು ಯಾಕೆ ಗೊತ್ತಾ…?

ಸೋಮವಾರ, 26 ಫೆಬ್ರವರಿ 2018 (13:20 IST)
ಮೈಸೂರು: ಇನ್ಮುಂದೆ ನಾನು ಯಾರನ್ನಾದ್ರೂ ಹೊಗಳುವ ಮುನ್ನ ಎಚ್ಚರ ವಹಿಸುತ್ತೇನೆ. ಅವರ ಪೂರ್ವಾಪರ ತಿಳಿದು ಮಾತನಾಡುತ್ತೇನೆ. ಈ ಹಿನ್ನೆಲೆಯಲ್ಲಿ ನನ್ನನ್ನು ಪ್ರೀತಿಸುವ ಜನರ ಕ್ಷಮೆ ಕೇಳುತ್ತೇನೆ ಎಂದು ನಟ ಪ್ರಕಾಶ್ ರೈ ಅವರು ಹೇಳಿದ್ದಾರೆ.


ಪ್ರಕಾಶ್  ರೈ ಹೀಗೆ ಹೇಳುವುದಕ್ಕೆ ಕಾರಣ ಕೂಡ ಇದೆ, ಉದ್ಯಮಿ ಪುತ್ರ ವಿದ್ವತ್ ಮೇಲೆ ಶಾಸಕ ಎನ್ ಎ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದ ಪ್ರಕರಣ ನಡೆದ ಬಳಿಕ. ಹ್ಯಾರಿಸ್ ಪುತ್ರ ನಲಪಾಡ್ ನನ್ನು ಪ್ರಕಾಶ್ ರೈ ಹೊಗಳಿರುವ ವಿಡಿಯೋವೊಂದು ಖಾಸಗಿ ಟಿವಿ ಚಾನೆಲ್ ನಲ್ಲಿ ಪ್ರಸಾರವಾಗಿತ್ತು. ಇದರ ಬಗ್ಗೆ ಸಾಮಾಜಿಕ ಜಾಲತಾಣದ ಬಗ್ಗೆ ಟ್ರೋಲ್ ಮಾಡಲಾಗಿತ್ತು.


ಇದರ ಕುರಿತು ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಪ್ರಕಾಶ್ ರೈ, ನಲಪಾಡ್ ಕೇಸಲ್ಲಿ ನಿಜಕ್ಕೂ ಮುಜುಗರವಾಗಿದೆ. ಒಂದು ಗ್ರಾಮವನ್ನು ದತ್ತು ತೆಗೆದುಕೊಳ್ಳಲು ಹಣ ನೀಡಿದ್ದರು. ಈ ಕ್ಷಣದಲ್ಲಿ ನಾನು ಇಂಥ ಯುವಕರು ಇರಬೇಕು ಎಂದು ಹೇಳಿದ್ದೆ, ಆದರೆ ಆತನ ಮನಸ್ಸಲ್ಲೊಬ್ಬ ರಾಕ್ಷಸ  ಇದ್ದಾನೆಂದು ಗೊತ್ತಿರಲಿಲ್ಲ ಎಂದರು.


ಇನ್ಮುಂದೆ ಯಾರನ್ನಾದರೂ ಹೊಗಳುವಾಗ ಎಚ್ಚರ ವಹಿಸುತ್ತೇನೆ. ಪೂರ್ವಾಪರ ತಿಳಿದು ಮಾತನಾಡುತ್ತೇನೆ ಎಂದು ಪ್ರಕಾಶ್ ರೈ ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ