ಮತ್ತೆ ಅಮೀರ್ ಖಾನ್ ಫೋಟೊ ಹಾಕಿ ಕೇಂದ್ರ ಸರ್ಕಾರವನ್ನು ಲೇವಡಿ ಮಾಡಿದ ನಟಿ ರಮ್ಯಾ

ಬುಧವಾರ, 12 ಸೆಪ್ಟಂಬರ್ 2018 (06:50 IST)
ಬೆಂಗಳೂರು : ಪೆಟ್ರೋಲ್, ಡಿಸೇಲ್ ಬೆಲೆ ಏರುತ್ತಿರುವ ಹಿನ್ನಲೆಯಲ್ಲಿ ಇದೀಗ ನಟಿ ರಮ್ಯಾ ಮತ್ತೆ ಕೇಂದ್ರ ಸರ್ಕಾರವನ್ನು ಲೇವಡಿ ಮಾಡಿದ್ದಾರೆ.


ಸೋಮವಾರ (ಸೆಪ್ಟೆಂಬರ್ 10) ದಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿರುವುದರಿಂದ ಮಿತ್ರಪಕ್ಷಗಳು ‘ಭಾರತ್ ಬಂದ್’ ನಡೆಸಿದ್ದರು. ಅಂದು ನಟಿ ರಮ್ಯಾ ಭಾರತದ ಕ್ರಿಕೆಟ್ ಆಟಗಾರ ರವೀಂದ್ರ ಜಡೇಜಾ ಅವರು ಗಳಿಸುವ ರನ್ ಗಿಂತ ಭಾರತದಲ್ಲಿ ಪೆಟ್ರೋಲ್ ದರವೇ ಹೆಚ್ಚಾಗುತ್ತಿದೆ ಎಂದು ಟ್ವೀಟ್ ಮಾಡಿ ಕೇಂದ್ರ ಸರ್ಕಾರವನ್ನು ಟೀಕಿಸಿದ್ದರು.


ಇದೀಗ ಮತ್ತೆ ‘ದಂಗಲ್’ ಸಿನಿಮಾದಲ್ಲಿ ಅಭಿನಯಿಸಿರುವ ಅಮೀರ್ ಖಾನ್ ಫೋಟೋವನ್ನು ಹಾಕಿ ಕೇಂದ್ರ ಸರ್ಕಾರದ ಕಾಲೆಳೆದಿದ್ದಾರೆ. ‘ದಂಗಲ್’ ಸಿನಿಮಾದಲ್ಲಿ ಅಮೀರ್ ಖಾನ್ ಅವರು ಎರಡು ಶೇಡ್‍ನಲ್ಲಿ ಅಭಿನಯಿಸಿದ್ದರು. ಒಂದು ಫಿಟ್ ಆಗಿರುವ ಯುವಕನ ಪಾತ್ರ, ಮತ್ತೊಂದು ಅಪ್ಪನ ಪಾತ್ರವನ್ನು ಮಾಡಿದ್ದರು. ಈಗ ನಟಿ ರಮ್ಯಾ ಆ ಸಿನಿಮಾದ ಎರಡು ಫೋಟೋವನ್ನು ಪೋಸ್ಟ್ ಮಾಡಿ ಫಿಟ್ ಆಗಿರುವ ಯುವಕನ ಪಾತ್ರಕ್ಕೆ ಯುಪಿಎ ಸರ್ಕಾರವೆಂದು, ದಪ್ಪವಾಗಿರುವ ಅಪ್ಪನ ಪಾತ್ರವನ್ನು ಎನ್‍ಡಿಎ ಸರ್ಕಾರಕ್ಕೆ ಹೋಲಿಸಿ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯ ಬಗ್ಗೆ ಟೀಕಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ