ಮೈತ್ರಿ ಸರಕಾರ ಭವಿಷ್ಯ ವರಿಷ್ಠರ ಕೈಯಲ್ಲಿ ಅಂತ ಡಿಸಿಎಂ ಹೇಳಿದ್ಯಾಕೆ?
ಭಾನುವಾರ, 23 ಜೂನ್ 2019 (19:03 IST)
ವಯಕ್ತಿಕ ಅಭಿಪ್ರಾಯಗಳಿಗಿಂತ ಕಾಂಗ್ರೆಸ್ – ಜೆಡಿಎಸ್ ಪಕ್ಷಗಳ ವರಿಷ್ಠರು ತೆಗೆದುಕೊಳ್ಳುವ ನಿರ್ಧಾರ ತುಂಬಾ ಮುಖ್ಯವಾಗಿರುತ್ತದೆ. ಹೀಗಂತ ಡಿಸಿಎಂ ಮೈತ್ರಿ ಸರಕಾರದ ಭವಿಷ್ಯ ಕುರಿತು ಹೊಸ ಬಾಂಬ್ ಸಿಡಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರಕಾರವಿದೆ. ಸರಕಾರದ ಅಳಿವು- ಉಳಿವಿನ ಕುರಿತು ಕೆಲವು ನಾಯಕರು ನೀಡುತ್ತಿರುವಂತಹ ಹೇಳಿಕೆಗಳನ್ನು ಗಮನಿಸುತ್ತಿರುವುದಾಗಿ ತಿಳಿಸಿದ ಅವರು, ಸೋಲಿನ ಹತಾಶೆಯಲ್ಲಿ ಈ ರೀತಿಯ ಹೇಳಿಕೆ ಸಾಮಾನ್ಯವಾಗಿ ಬರುತ್ತದೆ.
ಎಂ.ವೀರಪ್ಪ ಮೊಯ್ಲಿ ಹಿರಿಯ ರಾಜಕಾರಣಿಯಿದ್ದಾರೆ. ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ ಎಂದು ಹೇಳಿದ್ರು.
ಹೆಚ್.ಡಿ.ದೇವೇಗೌಡರೂ ಈ ಕುರಿತು ಮಾತನಾಡಿದ್ದಾರೆ. ಎಲ್ಲ ವಿಚಾರಗಳ ಕುರಿತು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಕುಳಿತು ನಿರ್ಧಾರ ಮಾಡಬೇಕು ಎಂದರು.
ಸಿಎಂ ಗ್ರಾಮವಾಸ್ತವ್ಯಕ್ಕೆ ಪರ್ಯಾಯವಾಗಿ ತಾವು ಜನಸಂಪರ್ಕ ಸಭೆ ನಡೆಸುತ್ತಿಲ್ಲ ಎಂದು ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ.