ಜಿಂದಾಲ್ ಕಂಪನಿಗೆ ಈ ಹಿಂದೆ ನೀಡಿದ ಭೂಮಿಯ ಲೆಕ್ಕತಪಾಸಣೆ ಆಗಬೇಕು. ಆದಷ್ಟು ಬೇಗ ಈ ಕೆಲಸ ಆಗಬೇಕು. ಹೀಗಂತ ಮೈತ್ರಿ ಸರಕಾರಕ್ಕೆ ಕಾಂಗ್ರೆಸ್ ನ ಮಾಜಿ ಸಚಿವ ಖಡಕ್ ಸೂಚನೆ ನೀಡಿದ್ದಾರೆ.
ಹುಬ್ಬಳ್ಳಿ ಯಲ್ಲಿ ಮಾಜಿ ಸಚಿವ ಎಚ್ ಕೆ ಪಾಟೀಲ್ ಹೇಳಿಕೆ ನೀಡಿದ್ದು, ಜಿಂದಾಲ್ ಕಂಪನಿಗೆ ಈ ಹಿಂದೆ ನೀಡಿದ ಭೂಮಿಯ ಲೆಕ್ಕತಪಾಸಣೆ ಆಗಬೇಕು. ಅದು ಆದಷ್ಟು ಬೇಗ ಆಗುವುದು ಸೂಕ್ತ ಎಂದಿದ್ದಾರೆ.
ಜಿಂದಾಲ್ ಗೆ 3666 ಎಕರೆ ಭೂಮಿ ಪರಭಾರೆ ಮಾಡುವ ವಿಚಾರವಾಗಿ ಆಕ್ಷೇಪ ವ್ಯಕ್ತಪಡಿಸಿದ್ದೆ. ಸರಕಾರವು ಸಚಿವ ಸಂಪುಟ ಉಪ ಸಮಿತಿ ರಚಿಸಿದೆ. ಈ ವಿಷಯವಾಗಿ ಗಂಭೀರ ಅಧ್ಯಯನ ಮಾಡಲು ಸಮಿತಿ ರಚಿಸಿದ್ದು ಸಕಾರಾತ್ಮಕ ನಿರ್ಣಯವಾಗಿದೆ ಎಂದು ಹೇಳಿದ್ರು.
ಅದರ ಶಿಫಾರಸ್ಸಿನ ನಂತರ ಕ್ರಮಕೈಗೊಳ್ಳಲಿದೆ. ಆ ನಿಟ್ಟಿನಲ್ಲಿ ಸಚಿವ ಸಂಪುಟ ಉಪ ಸಮಿತಿ ತಕ್ಷಣ ಕಾರ್ಯ ಪ್ರವೃತ್ತ ಆಗಬೇಕು ಎಂದು ಹೆಚ್ ಕೆ ಪಾಟೀಲ್ ಒತ್ತಾಯ ಮಾಡಿದ್ರು.