ರಾಕೇಶ್ ಸಾವಿಗೆ ನಾನೇಕೆ ಕಾರಣ ಎಂದ ಶಾಸಕ

ಭಾನುವಾರ, 22 ಸೆಪ್ಟಂಬರ್ 2019 (20:47 IST)
ಅನರ್ಹ ಶಾಸಕ ಎಂಟಿಬಿ ನಾಗರಾಜ್ ಹಾಗೂ ಶಾಸಕ ಭೈರತಿ ಸುರೇಶ್ ವಾಗ್ಯುದ್ಧ ನಡೆದಿದೆ. ರಾಜಕೀಯ ಕೆಸರೆರಚಾಟ ಇದೀಗ ತೀವ್ರಗೊಂಡಿದೆ.

ಮಾಜಿ ಸಿಎಂ ಸಿದ್ದರಾಮಯ್ಯರ ಪುತ್ರ ರಾಕೇಶ್ ಸಾವಿಗೆ ಶಾಸಕ ಭೈರತಿ ಸುರೇಶ್ ಕಾರಣ ಅಂತ ಅನರ್ಹ ಶಾಸಕ ಎಂಟಿಬಿ ನಾಗರಾಜ್‍ ನೇರವಾಗಿ ಆರೋಪ ಮಾಡಿದ್ದರು. ಇದೀಗ ಆರೋಪಕ್ಕೆ ಶಾಸಕ ಭೈರತಿ ಸುರೇಶ್ ಟಾಂಗ್ ನೀಡಿದ್ದಾರೆ.

ನಾನು ಹೇಗೆ ರಾಕೇಶ್ ಸಾವಿಗೆ ಕಾರಣ? ಅವನು ನನ್ನ ತಮ್ಮನಿದ್ದಂತೆ ಅಂತ ಭೈರತಿ ಹೇಳಿದ್ದಾರೆ. ರಾಕೇಶ್ ಸಾವಿನ ಬಗ್ಗೆ ಸಿದ್ದರಾಮಯ್ಯ ಮಾತನಾಡಬೇಕು ಹೊರತು ಎಂಟಿಬಿ ನಾಗರಾಜ್ ಅಲ್ಲ ಅಂತ ತಿರುಗೇಟು ನೀಡಿದ್ದಾರೆ.

ಸಿದ್ದರಾಮಯ್ಯರಿಂದ ನೆರವು ಪಡೆದುಕೊಂಡು ಅವರಿಗೆ ತಿರುಮಂತ್ರ ಹಾಕುತ್ತಿರೋ ಎಂಟಿಬಿಗೆ ನೈತಿಕತೆ ಇಲ್ಲ ಅಂದಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ