ಕಾವೇರಿ ವಿಚಾರದಲ್ಲಿ ಯಾಕೆ ನಾವು ರಾಜಕೀಯ ತರಬೇಕು-ಡಿಕೆಶಿ

ಶುಕ್ರವಾರ, 1 ಸೆಪ್ಟಂಬರ್ 2023 (21:47 IST)
ಬಿ ಎಲ್ ಸಂತೋಷ್ ರಾಷ್ಟ್ರೀಯ ನಾಯಕರು ಅಂತ ಭಾವಿಸಿದ್ದೇನೆ.ಸಿಟಿ ರವಿ ತರಹ, ಈಶ್ವರಪ್ಪ ತರಹ ಅವರು ಮಾತನಾಡಿದ್ರೆ ನಾನು ಏನೂ ಮಾಡಲು ಆಗುವುದಿಲ್ಲ.ಈಶ್ವರಪ್ಪ ಸಿಟಿ ರವಿ ತರಹ ಬಿ ಎಲ್ ಸಂತೋಷ್ ಮಾತನಾಡುವುದು ಬೇಡ.ಅವರ ಸ್ಟೇಟಸ್ ಹಾಳಾಗುವುದು ಬೇಡ.ಅವರ ತೂಕಕ್ಕೆ ತಕ್ಕಂತೆ ಮಾತನಾಡಲಿ,ಕಾವೇರಿ ವಿಚಾರದಲ್ಲಿ ಯಾಕೆ ನಾವು ರಾಜಕೀಯ ತರಬೇಕು.ಬಿಜೆಪಿ ಜೆಡಿಎಸ್ ನವರ ರಾಜಕೀಯ ನಿಲುವಿಗೆ ನಾನ್ಯಾಕೆ ಮಧ್ಯಪ್ರವೇಶ ಮಾಡಲಿ? ಅಂತಾ ಡಿಕೆಶಿ ಹೇಳಿದ್ದಾರೆ.ಕಾವೇರಿ ವಿಚಾರ ಸಂಬಂಧಿಸಿ CWMA ಸಭೆ ನಡೆದಾಗ ೨೪ ಸಾವಿರ ಕ್ಯುಸೆಕ್ ಮಾಡಬೇಕು ಅಂತ ಒತ್ತಾಯ ಮಾಡಿತ್ತು
 
೨೪ ಸಾವಿರ ಕ್ಯುಸೆಕ್ ನೀರು ಬಿಡಲಾಗಲ್ಲ ಅಂತ ವಾದ ಮಾಡಿದೆವು.೫ ಸಾವಿರ ಕ್ಯುಸೆಕ್ ಬಿಡಬೇಕು ಅಂಯ ಆದೇಶ ಮಾಡಿದರು.ನಾವು ೩ ಸಾವಿರ ಕ್ಯುಸೆಕ್ ಬಿಡ್ತೇವೆ ಅಂತ ಹೇಳಿದೆವು.ಈಗ ನಾವು ಮತ್ತೆ ಕರ್ನಾಟಕದ ಪರಿಸ್ಥಿತಿ ಸುಪ್ರಿಂ ಕೋರ್ಟ್ ಗೆ ಮನವರಿಕೆ ಮಾಡಿದ್ದೇವೆ.ನೀರು ಬಿಡಬೇಕಾಗಿದ್ದನ್ನು ಹಿಂದೆ ಬಿಟ್ಟಿದ್ದೇವೆ.ನಮ್ಮ ರೈತರನ್ನು ನಾವುಕಾಪಾಡಬೇಕು.ತಮಿಳುನಾಡಿನವರು ಬೆಳೆಗಳನ್ನು ಕಂಟ್ರೋಲ್ ಮಾಡ್ತಾ ಇಲ್ಲ.೯೩ ಟಿಎಂಸಿ ನೀರು ಈ ಬಾರಿ ತಮಿಳುನಾಡು ಬಳಸಿಕೊಂಡಿದೆ.ಹೆಚ್ಚೆಚ್ಚು ನೀರನ್ನು ತಮಿಳುನಾಡು ಬಳಸಿಕೊಂಡಿದೆ.ಸಂಕಷ್ಟ ಸಮಯದಲ್ಲಿ ಎಷ್ಟು ಕಡಿಮೆ ಬಳಸಿಕೊಳ್ಳಬೇಕಿತ್ತೋ ಅದಕ್ಕಿಂತ ಹೆಚ್ಚು ಬಳಸಿಕೊಂಡಿದ್ದಾರೆ.ಈ ಅಂಶವನ್ನು ನಾವು ಸುಪ್ರಿಂಗೆ ಮನವರಿಕೆ ಮಾಡಿದ್ದೇವೆ.ವಾಸ್ತವಾಂಶ ಬಂದು ನೋಡಿ ಅಂತ ನಾವು ಮನವಿ ಮಾಡಿಕೊಂಡಿದ್ದೇವೆ.ವಿಪಕ್ಷದವರು ಹೇಳಿದ ಪ್ರಕಾರ ನೀರು ನಿಲ್ಲಿಸಲು ಆಗುವುದಿಲ್ಲ.ಕಾನೂನು ತಜ್ಞರ ಜೊತೆಗೆ ನಾನು ಮಾತನಾಡಿದ್ದೇನೆ.ಮಳೆಯೂ ಇಲ್ಲ, ಬರೀ ಬೆಂಗಳೂರಿಗೆ ಮಳೆ ಬಂದಿದೆ ಕಾವೇರಿ ಬೇಸಿನ್ ಗೆ ಮಳೆ ಬಂದಿಲ್ಲ.ಎರಡೂ ಕಮಿಟಿಗಳ ಮುಂದೆ ನಮ್ಮ ವಾದ ಮಂಡಿಸಲು ತೀರ್ಮಾನ ಮಾಡಿದ್ದೇವೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ