ಜಿಲ್ಲಾ ಪಂಚಾಯಿತಿ ಸಿಇಓ ಅವರನ್ನು ಬಂಧಿಸಲು ಮುಂದಾಗಿರುವ ಘಟನೆ ನಡೆದಿದೆ.
ಬೀದರ್ ಏರ್ ಬೇಸ್ ಅನುಮತಿ ಪಡೆಯದೇ ಮೋಟಾರ್ ಪ್ಯಾರಾಚೂಟ್ ಹಾರಿಸಿದ ಹಿನ್ನಲೆ ಈ ಪ್ರಕರಣ ನಡೆದಿದೆ.
ಜಿಲ್ಲಾಡಳಿತಕ್ಕೆ ಏರ್ ಬೇಸ್ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. ಇದು ಸೂಕ್ಷ್ಮ ವಲಯ ಅಂತ ನಿಮಗೆ ಗೊತ್ತಿರಲಿಲ್ವಾ..? ಹೀಗಿದ್ದರು ಏಕೆ ಅನುಮತಿ ಪಡೆಯದೆ ಪ್ಯಾರಾಚೂಟ್ ಹಾರಾಟ ಮಾಡಿದೀರಿ..? ಮೋಟಾರ್ ಪ್ಯಾರಾಚೂಟ್ ಮೂಲಕ ಮತದಾನದ ಜಾಗೃತಿ ಮೂಡಿಸುತ್ತಿದ್ದ ಸಿಇಓ ಹಾಗೂ ಜಿಲ್ಲಾಡಳಿತ ನಡೆಗೆ ಗರಂ ಆಗಿ ಸಿಇಓ ಬಂಧನಕ್ಕೆ ಮುಂದಾಗಿದ್ದರು ಏರಬೇಸ್ ಅಧಿಕಾರಿಗಳು.
ಎಸ್ಪಿ ಶ್ರೀಧರ್, ಸಿಇಓ ಅಪಾಲಜಿ ಕೇಳಿದ್ದಕ್ಕೆ ಏರ್ ಬೇಸ್ ಅಧಿಕಾರಿಗಳು ಹಿಂದುರಿಗಿದ್ರು. ಜಿಲ್ಲೆಯಲ್ಲಿ ಯುದ್ದ ವಿಮಾನ ಹಾರಾಟ ತರಬೇತಿ ಕೇಂದ್ರ ಇದೆ. ಹೀಗಿರುವಾಗ 50 ಮೀಟರ್ ಎತ್ತರದಲ್ಲಿ ಏನು ಹಾರಾಟ ಮಾಡುವಂತಿಲ್ಲ. ಜಾಹೀರಾತು ಅಥವಾ ಜಾಗೃತಿ ಕಾರ್ಯಾಕ್ರಮವನ್ನ ಆಕಾಶದ ಮೂಲಕ ಹಾರಿಸಿ ತೋರಿಸಬೇಕಾದರೆ, ಅದಕ್ಕೆ ಬೀದರ್ ಏರ್ ಬೇಸ್ ಮತ್ತು ದೆಹಲಿಯ ಮುಖ್ಯ ಕೇಂದ್ರದಿಂದ ಅನುಮತಿ ಪಡೆಯಬೇಕು, ಹೀಗಿದ್ದರು ಜಿಲ್ಲಾಡಳಿತ ಅನುಮತಿ ಪಡೆಯದೆ ನಿರ್ಲಕ್ಷ್ಯವಹಿಸಿತ್ತು.