ಅತ್ತೆಯನ್ನು ಹೊಡೆದು ಸಾಯಿಸಿದ ವಿಧವೆ

ಸೋಮವಾರ, 22 ಫೆಬ್ರವರಿ 2021 (07:46 IST)
ಮುಂಬೈ : ವಿಧವೆಯೊಬ್ಬಳು ತನ್ನ ಅತ್ತೆಯನ್ನು ಹೊಡೆದು ಸಾಯಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ.

ಮಹಿಳೆಯ ಪತಿ 2 ವರ್ಷದ ಹಿಂದೆ ನಿಧನರಾಗಿದ್ದರು. ಮಹಿಳೆಗೆ ಅತ್ತೆಯ ಜೊತೆ ಕ್ಷುಲಕ ಕಾರಣಕ್ಕೆ ಜಗಳವಾಗಿದೆ. ಇದರಿಂದ ಕೋಪಗೊಂಡ ಮಹಿಳೆ ಕಬ್ಬಿಣದ ರಾಡ್ ನಿಂದ ಅತ್ತೆಯ ಮೇಲೆ ಹಲ್ಲೆ ನಡೆಸಿದ್ದಾಳೆ. ಇದರ ಪರಿಣಾಮ ಅತ್ತೆ ಸ್ಥಳದಲ್ಲಿಯೇ ಸಾವನಪ್ಪಿದ್ದಾಳೆ. ಬಳಿಕ ಮಹಿಳೆ ಟೈಲೆಟ್ ಕ್ಲಿನರ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಮಹಿಳೆಯ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ