ಗಂಡ, ಅತ್ತೆಗೆ ಕೊಲೆ ಬೆದರಿಕೆ ಹಾಕಿದ ಗರ್ಭಿಣಿ ಮಹಿಳೆ

ಶುಕ್ರವಾರ, 19 ಫೆಬ್ರವರಿ 2021 (10:00 IST)
ಅಹಮ್ಮದಾಬಾದ್: ಎರಡು ತಿಂಗಳ ಗರ್ಭಿಣಿ ಮಹಿಳೆಯೊಬ್ಬಳು ತನ್ನ ಗಂಡ ಮತ್ತು ಅತ್ತೆ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ ಆರೋಪ ಕೇಳಿಬಂದಿದೆ.


ಅಹಮ್ಮದಾಬಾದ್ ನ ಮಹಿಳೆ ಮೇಲೆ ಈಗ ಆಕೆಯ ಗಂಡ ಪೊಲೀಸರಿಗೆ ದೂರು ನೀಡಿದ್ದಾನೆ.ಆದರೆ ಕೆಲವು ದಿನಗಳ ಹಿಂದೆ ತನ್ನ ಅತ್ತೆ ತನಗೆ ಅಬಾರ್ಷನ್ ಮಾಡಿಸಿಕೊಳ್ಳಲು ಹೇಳಿದ್ದಳು ಎಂದು ದೂರಿದ್ದ ಮಹಿಳೆ ಗಂಡನಿಗೆ ಈ ವಿಚಾರ ತಿಳಿಸಿದ್ದಳು. ಆದರೆ ಆತ ನಂಬಿರಲಿಲ್ಲ. ಬಳಿಕ ಕೆಲವು ದಿನಗಳ ಮಟ್ಟಿಗೆ ಆಕೆ ತವರಿಗೆ ಹೋಗಿದ್ದಳು. ತವರಿನಿಂದ ಬಂದ ಬಳಿಕ ಗಂಡನ ಮೇಲೆ ಹಲ್ಲೆ ನಡೆಸಿದ್ದಾಗಿ ವರದಿಯಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ