ಗಂಡನಿಗೆ ಲಿವೆರ್ ಕೊಟ್ಟ ಮಹಾಸತಿ

ಗುರುವಾರ, 17 ಫೆಬ್ರವರಿ 2022 (14:48 IST)
ಕಳೆದ ನಾಲ್ಕು ವರ್ಷಗಳಿಂದ ಲಿವರ್ ಸಿರೋಸಿಸ್ ನಿಂದ ಬಳಲುತ್ತಿದ್ದ 49 ವರ್ಷದ ಗ್ವಾಲಿಯರ್ ನಿವಾಸಿಗೆ ಹೊಸ ಬಾಳು ಸಿಕ್ಕಿದೆ. ಅವರ ಜೀವ ಉಳಿಸಲು ತನ್ನ ಯಕೃತ್ತಿನ ಒಂದು ಭಾಗವನ್ನು ದಾನ ಮಾಡಿದ 47 ವರ್ಷದ ಪತ್ನಿಗೆ ಎಲ್ಲೆಡೆಯಿಂದ ಪ್ರಶಂಸೆ ಹರಿದುಬಂದಿದೆ. ಆಸ್ಟರ್ ಆರ್‌ವಿ ಆಸ್ಪತ್ರೆಯಲ್ಲಿ ಜೀವಂತ ದಾನಿಗಳ ಲಿವರ್ ಕಸಿ ಮಾಡಿಸಿಕೊಂಡ ದಂಪತಿಗಳು ಆರೋಗ್ಯವಾಗಿದ್ದಾರೆ.
ಆಸ್ಪತ್ರೆಯ ವೈದ್ಯರ ಪ್ರಕಾರ ಭಾರತದಾದ್ಯಂತ ಸಾವಿರಾರು ರೋಗಿಗಳು ಲಿವರ್ ಸಿರೋಸಿಸ್ ಅಥವಾ ಯಕೃತ್ತಿನ ವೈಫಲ್ಯದಿಂದ ಬಳಲುತ್ತಿದ್ದಾರೆ ಇಂತಹ ರೋಗಿಗಳಿಗೆ ಯಕೃತ್ತಿನ ಕಸಿ ಮಾತ್ರ ಪರಿಹಾರ. ಯಕೃತ್ತಿನ ಒಂದು ಭಾಗವನ್ನು ದಾನ ಮಾಡಿದಾಗ, ಉಳಿದ ಭಾಗವು ಕೆಲವು ವಾರಗಳಲ್ಲಿ ಬಹುತೇಕ ಸಾಮಾನ್ಯ ಗಾತ್ರಕ್ಕೆ ಬೆಳೆಯುತ್ತದೆ, ಜೀವಂತ ದಾನಿಗಳಿಂದ ಯಕೃತ್ತಿನ ಕಸಿ ಮಾಡುವಿಕೆಯು ಅತ್ಯಂತ ಸುರಕ್ಷಿತವಾದ ಚಿಕಿತ್ಸೆಯಾಗಿದೆ.
 
ವೈದ್ಯರಿಗೆ ಕೃತಜ್ಞತೆ ಸಲ್ಲಿಸಿದ ಪತ್ನಿ, ತನ್ನ ಯಕೃತ್ತಿನ ಭಾಗವನ್ನು ಪತಿಗೆ ದಾನ ಮಾಡಿ ಅವರ ಜೀವ ಉಳಿಸಿದ್ದಕ್ಕೆ ತುಂಬಾ ಸಂತೋಷವಾಗಿದೆ ಎಂದು ಹೇಳಿದರು, ಆಕೆಯ ಪತಿ ಮಾತನಾಡಿ "ನನಗೆ ಹೊಸ ಜೀವನ ಕೊಟ್ಟಿದ್ದಕ್ಕಾಗಿ ನಾನು ಅವಳಿಗೆ ಧನ್ಯವಾದ ಹೇಳುತ್ತೇನೆ. ನಮ್ಮ ಕಡೆಗೆ ಸಹಾನುಭೂತಿ ತೋರಿದ ವೈದ್ಯರಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ.” ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ