ಕೊಡಗು ಸೋಮವಾರ ಜಿಲ್ಲೆಪೇಟೆ ತಾಲೂಕಿನ ನೆಲ್ಯಹುದಿಕೇರಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಇಂದು ಕೂಡ 20 ವಿದ್ಯಾರ್ಥಿಗಳು ಹಿಜಾಬ್ ತೆಗೆಯುವುದಿಲ್ಲ ಎಂದು ಪಟ್ಟು ಹಿಡಿದು ಶಾಲೆಯಿಂದ ಮನೆಗೆ ಮರಳಿದ್ದಾರೆ. ಕೊಡಗು ಸೋಮವಾರ ಜಿಲ್ಲೆಪೇಟೆ ತಾಲೂಕಿನ ನೆಲ್ಯಹುದಿಕೇರಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಇಂದು ಕೂಡ 20 ವಿದ್ಯಾರ್ಥಿಗಳು ಹಿಜಾಬ್ ತೆಗೆಯುವುದಿಲ್ಲ ಎಂದು ಪಟ್ಟು ಹಿಡಿದು ಶಾಲೆಯಿಂದ ಮನೆಗೆ ಮರಳಿದ್ದಾರೆ.
ಹಿಜಾಬ್ ಇಲ್ಲದೆ ನಾವು ಮಕ್ಕಳನ್ನು ಕಳುಹಿಸುವುದಿಲ್ಲ ಎಂದು ಪೋಷಕರು ಹೇಳಿದ್ದಾರೆ. ಶಾಲೆಯ ಮುಖ್ಯ ಶಿಕ್ಷಕ ಆಂಟನಿ ಆಲ್ವಾರಿಸ್ ಮಕ್ಕಳನ್ನು ಮನವೊಲಿಸಲು ಯತ್ನಿಸಿದ್ದಾರೆ. ಆದರೆ ವಿದ್ಯಾರ್ಥಿನಿಯರು ತಮ್ಮ ಪಟ್ಟು ಸಡಿಲಿಸದೆ, ಹಿಜಾಬ್ ಧರಿಸಲು ಬಿಡದಿದ್ದರೆ ನಾವು ಶಾಲೆಗೆ ಬರಲ್ಲ ಎಂದು ಹಿಂದಕ್ಕೆ ತೆರಳಿದ್ದಾರೆ.
ನೆಲ್ಲಿಹುದಿಕೇರಿಯಲ್ಲಿ ಸ್ವಲ್ಪ ಬಾಹುಳ್ಯ ಇದ್ದು ಒಂದಷ್ಟು ಮಂದಿ ಹಿಜಾಬ್ ತೆಗೆದು ತರಗತಿಗೆ ಬಂದರೆ, ಕೆಲವು ಖಟ್ಟರ್ ವಾದಿಗಳು ತಮ್ಮ ಮಕ್ಕಳಿಗೆ ಹಿಜಾಬ್ ತೆಗೆಯದಂತೆ ಸೂಚನೆ ನೀಡಿದರು. ಹೀಗಾಗಿ ಎರಡನೇ ದಿನವೂ ಈ ಶಾಲೆಯಲ್ಲಿ ಹೈರಾಮಾ ಮುಂದುವರಿದಿದೆ. ಸೋಮವಾರ 30 ಮುಸ್ಲಿಂ ವಿದ್ಯಾರ್ಥಿನಿಯರು ಇದೇ ಶಾಲೆಯಿಂದ ಮರಳಿ ಮನೆಗೆ ತೆರಳಿದ್ದರು.