ಆಟೋ ದರ ಏರಿಕೆಯಾಗುತ್ತಾ, ಇಲ್ವಾ ಇಲ್ಲಿದೆ ಡೀಟೈಲ್ಸ್

Krishnaveni K

ಬುಧವಾರ, 26 ಮಾರ್ಚ್ 2025 (12:10 IST)
ಬೆಂಗಳೂರು: ಸಾಕಷ್ಟು ಬೆಲೆ ಏರಿಕೆಗಳಿಂದ ತತ್ತರಿಸಿರುವ ಜನತೆಗೆ ಸದ್ಯದಲ್ಲೇ ಆಟೋ ದರ ಏರಿಕೆ ಶಾಕ್ ಕಾದಿದೆ ಎನ್ನಲಾಗಿತ್ತು. ಇದೀಗ ಆಟೋ ದರ ಏರಿಕೆಯಾಗುತ್ತಾ, ಇಲ್ವಾ ಎಂಬ ಅನುಮಾನಗಳಿಗೆ ಉತ್ತರ ಸಿಕ್ಕಿದೆ.

ಇತ್ತೀಚೆಗಷ್ಟೇ ಬೆಂಗಳೂರು ಡಿಸಿ ಜೊತೆ ಆಟೋ ಚಾಲಕರ ಸಂಘಟನೆಗಳು ಸಭೆ ನಡೆಸಿದ್ದವು. ಈ ವೇಳೆ ದರ ಹೆಚ್ಚಳದ ಘೋಷಣೆಯಾಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಈಗ ಸದ್ಯಕ್ಕೆ ದರ ಏರಿಕೆ ಮಾಡದಿರಲು ತೀರ್ಮಾನಿಸಲಾಗಿದೆ.

ಏಪ್ರಿಲ್ 1 ರಿಂದ ಆಟೋ ದರ ಏರಿಕೆಯಾಗಬಹುದು ಎನ್ನಲಾಗಿತ್ತು. ಆದರೆ ಅದಕ್ಕೀಗ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ಇದೀಗ ಬೆಂಗಳೂರು ಡಿಸಿ ಸದ್ಯಕ್ಕೆ ಆಟೋ ದರ ಹೆಚ್ಚಳವಿಲ್ಲ. ಈ ಬಗ್ಗೆ ವರದಿ ಸಿದ್ಧಪಡಿಸಬೇಕಿದೆ. ಅದಾದ ಬಳಿಕವಷ್ಟೇ ದರ ಹೆಚ್ಚಳ ಮಾಡಬೇಕಾ ಬೇಡವೇ ಎಂಬ ಬಗ್ಗೆ ತೀರ್ಮಾನ ಮಾಡಲಿದ್ದೇವೆ ಎಂದಿದ್ದಾರೆ.

ಹೀಗಾಗಿ ಈಗಾಗಲೇ ಬಸ್, ಮೆಟ್ರೋ ದರ ಹೆಚ್ಚಳವಾಗಿರುವ ಶಾಕ್ ನಲ್ಲಿರುವ ಜನತೆಗೆ ಆಟೋ ದರ ಹೆಚ್ಚಳವಾಗುತ್ತಿಲ್ಲ ಎಂಬ ವಿಚಾರ ಸ್ವಲ್ಪ ನೆಮ್ಮದಿ ತರುವಂತಾಗಿದೆ. ಆದರೆ ಯುಗಾದಿಗೆ ಸಿಹಿ ಸುದ್ದಿಯ ನಿರೀಕ್ಷೆಯಲ್ಲಿದ್ದ ಆಟೋ ಚಾಲಕರಿಗೆ ಕಹಿ ಸುದ್ದಿ ಸಿಕ್ಕಂತಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ