Karnataka toll fare: ಏಪ್ರಿಲ್ 1 ರಿಂದ ಕರ್ನಾಟಕದಲ್ಲಿ ಟೋಲ್ ಸುಂಕವೂ ದುಬಾರಿ

Krishnaveni K

ಬುಧವಾರ, 26 ಮಾರ್ಚ್ 2025 (10:26 IST)
Photo Credit: X
ಬೆಂಗಳೂರು: ಎಲ್ಲಾ ಬೆಲೆ ಏರಿಕೆಗಳ ನಡುವೆ ಈಗ ಕರ್ನಾಟಕದಲ್ಲಿ ಏಪ್ರಿಲ್ 1 ರಿಂದ ಟೋಲ್ ಸುಂಕವೂ ಹೆಚ್ಚಳವಾಗಲಿದ್ದು, ವಾಹನ ಸವಾರರ ಜೇಬಿಗೆ ಕತ್ತರಿ ಬಿದ್ದಂತಾಗಲಿದೆ.

ವಾರ್ಷಿಕ ದರ ಪರಿಷ್ಕರಣೆ ಭಾಗವಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೋಲ್ ಸುಂಕ ಹೆಚ್ಚಳಕ್ಕೆ ಮುಂದಾಗಿದೆ. ಅದರಂತೆ ಏಪ್ರಿಲ್ 1 ರಿಂದ ಟೋಲ್ ಸುಂಕ ಮತ್ತಷ್ಟು ದುಬಾರಿಯಾಗಲಿದೆ. ರಾಜ್ಯದ 66 ಟೋಲ್ ಪ್ಲಾಜಾಗಳಲ್ಲಿ ಪರಿಷ್ಕೃತ ದರ ಅನ್ವಯವಾಗಲಿದೆ.

ಎಷ್ಟು ಹೆಚ್ಚಳ?
ಪರಿಷ್ಕೃತ ದರದ ಪ್ರಕಾರ ಟೋಲ್ ಸುಂಕ ಗರಿಷ್ಠ ಶೇ.5 ರಷ್ಟು ಮತ್ತು ಕನಿಷ್ಠ ಶೇ.3 ರಷ್ಟು ಹೆಚ್ಚಳವಾಗಲಿದೆ. ಬೆಂಗಳೂರು-ಮೈಸೂರು, ಬೆಂಗಳೂರು-ತಿರುಪತಿ, ಬೆಂಗಳೂರು-ಬಾಗೇಪಲ್ಲಿ, ಬೆಂಗಳೂರು-ಹೈದರಾಬಾದ್ ಸೇರಿದಂತೆ ಒಟ್ಟು 66 ಟೋಲ್ ಪ್ಲಾಜಾಗಳಲ್ಲಿ ದರ ಹೆಚ್ಚಳವಾಗಲಿದೆ.

2023-24 ನೇ ಸಾಲಿನಲ್ಲಿ ಭಾರತದಲ್ಲಿ ಟೋಲ್ ಸಂಗ್ರಹಣೆಯಿಂದ ಒಟ್ಟು 64, 809.86 ಕೋಟಿ ರೂ. ಟೋಲ್ ಸಂಗ್ರಹವಾಗಿತ್ತು. ಇದೀಗ ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಶುಲ್ಕಗಳಿಗೆ ಹೊಸ ನೀತಿಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ