ರಾಜೀವ್ ಚಂದ್ರಶೇಖರ್ ಗೆ ಮಹಿಳೆಯರು ಅಟ್ಟಿಸಿಕೊಂಡು ಹೋಗಿದ್ಯಾಕೆ?

ಮಂಗಳವಾರ, 26 ಮಾರ್ಚ್ 2019 (16:36 IST)
ಚುನಾವಣೆ ರಣಕಣ ಕಾವೇರಿರುವಂತೆ ಅಭ್ಯರ್ಥಿಗಳ ಹಾಗೂ ಕಾರ್ಯಕರ್ತರ ಸಿಟ್ಟು ಅಲ್ಲಲ್ಲಿ ಸ್ಪೋಟಗೊಳ್ಳುತ್ತಲೇ ಇದೆ.
ದಿ. ಅನಂತಕುಮಾರ್ ನಿವಾಸದ ಎದುರು ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ ನಡೆಯಿತು.

ತೇಜಸ್ವಿನಿ ಅನಂತಕುಮಾರ್ ಗೆ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಅನಂತ್ ಅಭಿಮಾನಿಗಳು ತೇಜಸ್ವಿನಿ ಅವರ ಪರ ಘೋಷಣೆ ಕೂಗಿದರು.

ದಿ.ಅನಂತಕುಮಾರ್ ನಿವಾಸಕ್ಕೆ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಭೇಟಿ ನೀಡಿದರು. ಅವರಿಗೆ ಮುತ್ತಿಗೆ ಹಾಕಿದರು ತೇಜಸ್ವಿನಿ ಅನಂತಕುಮಾರ್ ಬೆಂಬಲಿಗರು. ತೇಜಸ್ವಿ ಸೂರ್ಯ ಜತೆಯಲ್ಲಿ ಬಂದಿದ್ದ ರಾಜೀವ್ ಚಂದ್ರಶೇಖರ್  ಹೊರಡುತ್ತಿದ್ದಂತೆ ಅಟ್ಟಿಸಿಕೊಂಡು ಹೋದ ಮಹಿಳೆಯರು ಕಾರಿಗೆ ಅಡ್ಡ ನಿಂತು ಧಿಕ್ಕಾರ ಕೂಗಿದ್ರು.

ಆಗ ಮಹಿಳೆಯರನ್ನು ಚದುರಿಸಿ ಪೊಲೀಸರು ದಾರಿ ಮಾಡಿಕೊಟ್ಟರು.ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ