ಶಿವಮೊಗ್ಗದ ಸೊರಬ ತಾಲ್ಲೂಕಿನ ಕುಳವಳ್ಳಿ ಹಕ್ಕಲ ಕೇರಿ ತಿಪ್ಪಿನಕಟ್ಟೆಯಲ್ಲಿ ಹಲವಾರು ದಿನಗಳಿಂದ ವಾಮಾಚಾರ ನಡೆಯುತ್ತಿದೆ.. ಇದರಿಂದಾಗಿ ಗ್ರಾಮಸ್ಥರು ಭಯ ಭೀತರಾಗಿದ್ದಾರೆ. ಸೊರಬ ತಾಲೂಕಿನ ಉಳವಿ ಹೋಬಳಿ ಹೆಗ್ಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಳವಳ್ಳಿ ಗ್ರಾಮದ ಕೆರೆಯಲ್ಲಿ ಆಗಂತುಕರು ರಾತ್ರಿ ವೇಳೆ ಹುಲ್ಲಿನ ಚಟ್ಟ, ನಿಂಬೆ ಹಣ್ಣು, ತೆಂಗಿನ ಕಾಯಿ, ಮೂಳೆ, ಕೂದಲನ್ನು ಹಾಕಿ ವಾಮಾಚಾರಕ್ಕೆ ಬಳಸುತ್ತಿದ್ದಾರೆ.ಇನ್ನು ರಕ್ತದ ಬಲಿ ಅನ್ನ, ನೀರಿನಲ್ಲಿ ತೇಲುವ ವೃತ, ಒಡೆದ ಮಡಿಕೆ ಇತ್ಯಾದಿ ವಸ್ತುಗಳನ್ನು ಬಳಸಿ ಪೂಜೆ ನಡೆಸಿದ್ದಾರೆ.. ಇದರಿಂದ ಸ್ಥಳಿಯರಿಗೆ ಆತಂಕದ ವಾತಾವರಣ ಸೃಷ್ಟಿಯಾಗಿದೆ