ಹಣಕ್ಕಾಗಿ ಪೀಡಿಸಿದ ಗಂಡ: ಮಗಳೊಂದಿಗೆ ಕೆರೆಗೆ ಆಹಾರವಾದ ಮಹಿಳೆ
ಸೋಮವಾರ, 6 ಡಿಸೆಂಬರ್ 2021 (10:06 IST)
ಮುಳಬಾಗಿಲು: ಗಂಡ ಮತ್ತು ಮನೆಯವರ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಮಹಿಳೆ ತನ್ನ ಮಗುವಿನೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮುಳಬಾಗಿಲು ತಾಲೂಕಿನಲ್ಲಿ ನಡೆದಿದೆ.
2018 ರಲ್ಲಿ ಇಬ್ಬರ ಮದುವೆಯಾಗಿತ್ತು. ಆದರೆ ಮದುವೆಯಾದಾಗಿನಿಂದ ಗಂಡ, ಅತ್ತೆ, ಮಾವ ಮತ್ತು ಗಂಡನ ಸಹೋದರಿ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದರು. ಈ ಬಗ್ಗೆ ಮೂರು ಬಾರಿ ರಾಜೀ ಪಂಚಾಯ್ತಿಯೂ ನಡೆದಿದೆ ಎನ್ನಲಾಗಿದೆ.
ಇದೀಗ ಗಂಡನ ಮನೆಯವರ ಹಣದ ದಾಹಕ್ಕೆ ಬೇಸತ್ತ ಮಹಿಳೆ ಮಗುವಿನೊಂದಿಗೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ಸಂಬಂಧ ಮಹಿಳೆಯ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಮಹಿಳೆ ಸಾವಿಗೆ ಮುನ್ನ ತನ್ನ ಸಾವಿಗೆ ಕಾರಣವಾದವರ ಬಗ್ಗೆ ಡೆತ್ ನೋಟ್ ಬರೆದಿದ್ದಾಳೆ ಎಂದು ಕುಟುಂಬಸ್ಥರು ಹೇಳಿದ್ದಾರೆ.