ಮಹಿಳೆ ಎಲ್ಲಾ ಕ್ಷೇತ್ರಗಳಲ್ಲೂ ಮುನ್ನುಗ್ಗುತ್ತಿದ್ದಾಳೆ. ಇಂದು ಈ ಮಹಿಳೆಯರಿಗಾಗಿ ಇಡೀ ಜಗತ್ತಿನಾದ್ಯಂತ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಮಹಿಳೆ ಅಬಲೆಯಿಂದ ಸಬಲೆಯಾದ ಹಾದಿಯ ಯಶಸ್ಸಿನ ಸಂಭ್ರಮವನ್ನು ಆಚರಿಸಲಾಗುತ್ತಿದೆ. ನಬಾಡ್ ರೂರಲ್ ಯುನಿಟ್ ಸಂಸ್ಥೆ ವತಿಯಿಂದ ಮಲ್ಲೇಶ್ವರಂನ ಯಂಗ್ ಸ್ಟಾರ್ ಕಬ್ಬಡ್ಡಿ ಕ್ರೀಡಾಂಗಣದಲ್ಲಿ ಅದ್ದೂರಿಯಾಗಿ ಮಹಿಳಾ ದಿನಾಚರಣೆ ಆಚರಿಸಲಾಯಿತು. ಇನ್ನೂ ಈ ಕಾರ್ಯಕ್ರಮಕ್ಕೆಉನ್ನತ ಶಿಕ್ಷಣ ಸಚಿವರಾದ ಅಶ್ವಥ್ ನಾರಾಯಣ್ ಭಾಗಿಯಾಗಿ ಮಾತನಾಡಿದ್ರು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮಹಿಳೆಯರಿಗೆ ಮಹಿಳಾ ದಿನಾಚರಣೆಯ ಶುಭಾಶಯ ಕೋರಿದ್ರು. ರಾಜ್ಯದಲ್ಲಿ ಸ್ತ್ರೀ ಸಾಮರ್ಥ್ಯ ಯೋಜನೆಯನ್ನ ಮಳೆಯರಿಗಾಗಿ ಈ ಯೋಜನೆಯನ್ನ ತಂದಿದ್ದೇವ.ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬನೆಯಗಿ ಮುಂದೆ ಬರಲು ಈ ಯೋಜನೆ ಸಹಕಾರಿಯಾಗಲಿದೆ. ಇದಕ್ಕಾಗಿ ರಾಜ್ಯ ಸರ್ಕಾರ 500 ಕೋಟಿಯನ್ನ ಮೀಸಲಿಟ್ಟಿದೆ.ಆರಂಭದಲ್ಲಿ ಈಗ 100 ಕೋಟಿ ಬಿಡುಗಡೆ ಮಾಡಲಾಗ್ತಿದೆ. ಮಹಿಳಾ ಸಬಲಿಕರಣಕ್ಕಾಗಿ ರಾಜ್ಯ ಸರ್ಕಾರ ಎಲ್ಲಾ ರೀತಿಯ ಯೋಜನೆ ಹಮ್ಮಿಕೊಂಡಿದೆ.ಆರ್ಥಿಕ ವ್ಯವಸ್ಥೆ ಬಲಪಡಿಸಲು ಮಹಿಳೆಯರ ದೊಡ್ಡ ಕೊಡುಗೆ ಅಗತ್ಯವಿದೆ.ಎಂದು ತಿಳಿಸಿದ್ರು.ಈ ಕಾರ್ಯಕ್ರಮದಲ್ಲಿ ಬೆಂಗಳೂರು ಉತ್ತರದ ಮಹಿಳೆಯರು ಭಾಗಿಯಾಗಿದ್ರು.