ಅವಘಡ: ನೆಲಕ್ಕಪ್ಪಳಿಸಿತು ಕೊಟ್ಟೂರೇಶ್ವರ ತೇರು

ಬುಧವಾರ, 22 ಫೆಬ್ರವರಿ 2017 (08:51 IST)
ಕೊಟ್ಟೂರು: ಬಳ್ಳಾರಿ ಜಿಲ್ಲೆ ಕೊಟ್ಟೂರಿನ ಗುರು ಕೊಟ್ಟೂರೇಶ್ವರನ ತೇರು ಮುರಿದು ಬಿದ್ದು ಭಾರಿ ಅನಾಹುತ ಸಂಭವಿಸಿದ್ದು, ಹಲವರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.  ಉತ್ಸವದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಂಥ ದುರ್ಘಟನೆ ನಡೆದಿದೆ.

ವಾರ್ಷಿಕ ಜಾತ್ರೆ ನಿಮಿತ್ತ ಲಕ್ಷಾಂತರ ಭಕ್ತರು ಈ ಜಾತ್ರೆಯಲ್ಲಿ ಪಾಲ್ಗೊಂಡಿದ್ದರು. ಯತ್ಸವದ ವೇಳೆ ಶ್ರೀ ಕೊಟ್ಟೂರು ಸ್ವಾಮಿಯ ರಥೋತ್ಸವ ಸಂಜೆಯ ಹೊತ್ತು ನಡೆದಿತ್ತು. ರಥೋತ್ಸವದ ಗಮ್ಯ ತಲುಪಿ ವಾಪಸಾಗುವಾಗ ಈ ಘಟನೆ ನಡೆದಿದೆ. 
 
ದೇವಸ್ಥಾನದಿಂದ ಸುಮಾರು ಮುನ್ನೂರು ಅಡಿ, ಇನ್ನೊಂದು ತುದಿಯಲ್ಲಿರುವ ಬಸವನ ದೇವಸ್ಥಾನಕ್ಕೆ ತಲುಪಿ ಮರಳುವಾಗ ಈ ಘಟನೆ ಸಂಭವಿಸಿದೆ. ಲಕ್ಷಾಂತರ ಜನರು ಸೇರಿದ್ದರಿಂದ ಕಾರ್ಯಾಚರಣೆ ನಡೆಸಲು ತೊಂದರೆಯಾಗಿತಗತು. ಸ್ಥಳಕ್ಕೆ ಅಂಬ್ಯುಲನ್ಸ್ ಆಗಮಿಸಿತ್ತಾದರೂ ಜನರ ಮಧ್ಯೆ ತೂರಿ ಹೋಗಲು ಸಾಧ್ಯವಾಗಿರಲಿಲ್ಲ. ರಥದ ಅಡಿಗೆ ಸಿಲುಕಿರುವ ಹಲವರಿಗೆ ಗಾಯವಾಗಿದ್ದು, ಚಿಕಿತ್ಸೆಗಾಗಿ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ.
 
ಸ್ಥಳದಲ್ಲಿ ಡಿವೈಎಸ್ಪಿ ಸೇರಿದಂತೆ ಹಲವು ಅಧಿಕಾರಿಗಳು ಇದ್ದು ಕಾರ್ಯಾಚರಣೆ ನಡೆಸಿದ್ದಾರೆ.
 
ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಜಿಲ್ಲಾಧಿಕಾರಿ ರಾಮ್‌ಪ್ರಸಾದ್‌ಮನೋಹರ್‌ ಸ್ಪಷ್ಟ ಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ