ಸುಧಾಮೂರ್ತಿ ಹೇಳುವ ಈ ಮೂರು ಜೀವನಪಾಠವನ್ನು ತಪ್ಪದೇ ಪಾಲಿಸಿ

Krishnaveni K

ಸೋಮವಾರ, 4 ಆಗಸ್ಟ್ 2025 (10:27 IST)
ಸುಧಾಮೂರ್ತಿ ಕೇವಲ ಉದ್ಯಮಿ ಮಾತ್ರವಲ್ಲ ಸಾಹಿತಿ, ಜೀವನ ಪಾಠ ಹೇಳುವ ವಾಕ್ಚತುರೆ ಕೂಡಾ. ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸುವುದು ಹೇಗೆ ಮತ್ತು ಯಶಸ್ವಿಯಾಗುವುದು ಹೇಗೆ ಎಂಬ ಬಗ್ಗೆ ಅವರು ಮೂರು ಪಾಠಗಳನ್ನು ಹೇಳುತ್ತಾರೆ. ಕಾರ್ಯಕ್ರಮವೊಂದರಲ್ಲಿ ಅವರು ಹಿಂದೆ ನೀಡಿದ್ದ ಈ ಮೂರು ಮಂತ್ರಗಳು ನಮಗೆ ಜೀವನಪಾಠವಾಗುತ್ತದೆ.

ನಿಜ ಜೀವನದಲ್ಲಿ ಸಾಕಷ್ಟು ಸಮಸ್ಯೆ ಬರುತ್ತದೆ. ನೀವು ಬುದ್ಧಿವರಂತರಾಗಿದ್ದರೆ ನಿಮಗೇ ಆ ಅನುಭವವಾಗಬೇಕೆಂದೇನಿಲ್ಲ. ಇನ್ನೊಬ್ಬರ ಕಷ್ಟಗಳನ್ನು ನೋಡಿ, ಅವರು ಹೇಗೆ ಅದರಿಂದ ಹೊರಬಂದರು ಎಂದು ಪಾಠ ಕಲಿಯಬಹುದು. ಅವರು ಹೇಗೆ ವಿಫಲರಾದರು ಎಂದು ಕಲಿಯಿರಿ. ಇದು ಉತ್ತಮ ಕಾರ್ಪೋರೇಟರ್ ನ ಲಕ್ಷಣ.

ಒಂದು ವೇಳೆ ಈ ಸಮಸ್ಯೆಗಳು ನಿಮ್ಮನ್ನು ಬಾಧಿಸುತ್ತಿದ್ದರೆ ಅದರಿಂದ ನೀವು ನಿಮ್ಮದೇ ಕಠಿಣ ಪರಿಶ್ರಮದಿಂದ ಹೊಸ ದಾರಿ ಕಂಡುಕೊಳ್ಳುತ್ತೀರಿ ಎಂದರೆ ನೀವು ಎವರೇಜ್ ವ್ಯಕ್ತಿ ಎಂದರ್ಥ.

ಒಂದು ವೇಳೆ ನೀವು ವಿಫಲರಾದ ಮೇಲೂ ನೀವು ಪಾಠ ಕಲಿಯಲಿಲ್ಲ ಎಂದರೆ ನೀವು ಮಂದ ವ್ಯಕ್ತಿ ಎಂದರ್ಥ. ಜೀವನದಲ್ಲಿ ಮೂರು ವಿಧದ ವರ್ಗೀಕರವಿದೆ. ಇನ್ನೊಬ್ಬರ ತಪ್ಪಿನಿಂದ ಕಲಿಯುವುದು, ನಮ್ಮದೇ ತಪ್ಪಿನಿಂದ ಕಲಿಯುವುದು ಅಥವಾ ತಪ್ಪಿನಿಂದಲೂ ಕಲಿಯದೇ ಇರುವುದು. ಈ ಮೂರು ವಿಚಾರಗಳು ಜೀವನದಲ್ಲಿ ನಮಗೆ ಅತೀ ದೊಡ್ಡ ಪಾಠ ಎಂದು ಅವರು ಹಿಂದೊಮ್ಮೆ ಹೇಳಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ