ಮಹಿಳೆ ಮೇಲೆ ಜಮೀನಿನಲ್ಲಿ ನಡೆಯಿತು ಆ ಕೆಲಸ
ಮಹಿಳೆಯರು ಅನ್ನೋದನ್ನು ಮರೆತು ವಿರೋಧಿಗಳು ಮಾಡಬಾರದ ಕೆಲಸ ಮಾಡಿದ್ದಾರೆ.
ಕೋಲಾರದಲ್ಲಿ ಜಮೀನು ವಿಚಾರವಾಗಿ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದಿದೆ. ಘಟನೆಯಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿವೆ.
ಮುಳಬಾಗಲು ತಾಲೂಕಿನ ಪಿಚ್ಚಗುಂಟ್ಲಹಳ್ಳಿಯಲ್ಲಿ ನಡೆದ ಘಟನೆ ಇದಾಗಿದೆ.
ಗೋಪಾಲಪ್ಪ ಕುಟುಂಬದ ಮೇಲೆ ವಿರೋಧಿಗಳಿಂದ ಕಬ್ಬಿಣದ ಸಲಕರಣೆಗಳಿಂದ ಹಲ್ಲೆ ನಡೆಸಲಾಗಿದ್ದು, ಘಟನೆಯಲ್ಲಿ ಮಹಿಳೆಯರು ಗಂಭೀರ ಗಾಯಗೊಂಡಿದ್ದಾಳೆ.
ಮಹಿಳೆಯರನ್ನು ಜಮೀನಿನಲ್ಲೇ ಎಳೆದಾಡಿ ಹಿಗ್ಗಾಮುಗ್ಗಾ ಹಲ್ಲೆ ನಡೆಸಲಾಗಿದೆ. ಅದೇ ಊರಿನ ನಾರಾಯಣಪ್ಪ, ನರಸಿಂಹ ಎಂಬುವವರಿಂದ ಹಲ್ಲೆ ನಡೆದಿದೆ.
ಹಲ್ಲೆಗೊಳಗಾದ ಮೂವರಿಗೆ ಮುಳಬಾಗಿಲು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ನಂಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.