ಬೆಂಗಳೂರು : ಮಹಿಳೆಯರ ಗುಪ್ತಾಂಗ ವಿಚಿತ್ರವಾದ ವಾಸನೆ ಬರುತ್ತದೆ. ಆದ್ದರಿಂದ ಮಹಿಳೆಯರು ಗುಪ್ತಾಂಗದ ಶುಚಿತ್ವದ ಬಗ್ಗೆ ಹೆಚ್ಚು ಗಮನ ಕೊಡಬೇಕಾಗುತ್ತದೆ. ಯೋನಿಯ ಈ ವಾಸನೆ ಕಾರಣವೇನೆಂಬುದು ಇಲ್ಲಿದೆ ನೋಡಿ.
ನಮ್ಮ ದೇಹದಲ್ಲಿ ಎರಡು ವಿಧದ ಬೆವರಿನ ಗ್ರಂಥಿಗಳಿವೆ. ದೇಹದ ಇತರ ಭಾಗದಲ್ಲಿ ದ್ರವ ರೂಪದಲ್ಲಿ ಹೊರ ಬರುವ ಬೆವರಿನ ಗ್ರಂಥಿಗಳಿರುತ್ತವೆ. ಇದು ನಮ್ಮ ದೇಹದ ವಾಸನೆಗೆ ಕಾರಣವಾಗಿದೆ.
ಅದೇರೀತಿ ಗುಪ್ತಾಂಗದಲ್ಲಿ ಅಪೋಕ್ರಿನ್ ಎನ್ನುವ ಬೆವರು ಗ್ರಂಥಿಗಳಿರುತ್ತವೆ. ಇದು ವಿಚಿತ್ರ ವಾಸನೆಯುಕ್ತ ಬೆವರು ಹೊರ ಸೂಸುತ್ತವೆ. ಹೀಗಾಗಿ ಯೋನಿ ಭಾಗದಲ್ಲಿ ಸ್ತ್ರೀಯರಿಗೆ ವಿಚಿತ್ರ ವಾಸನೆಯಿರುತ್ತದೆ.
ಆದಕಾರಣ ಮಹಿಳೆಯರು ಆಗಾಗ ಗುಪ್ತಾಂಗವನ್ನು ತೊಳೆದುಕೊಳ್ಳುತ್ತಿರಬೇಕು. ಇಲ್ಲವಾದರೆ ಇದು ಗುಪ್ತಾಂಗದ ತುರಿಕೆಗೆ ಕಾರಣವಾಗಬಹುದು.