ಅಂತೂ ಇಂತೂ ಕುಂತಿ ಮಕ್ಕಳಿಗೆ ಅಧಿಕಾರವಿಲ್ಲ: ದತ್ತಾ

ಗುರುವಾರ, 24 ನವೆಂಬರ್ 2016 (14:13 IST)
ರಾಜ್ಯದಾದ್ಯಂತ ಭೀಕರ ಬರದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರಕಾರ ರೈತರ ಸಾಲ ಮನ್ನಾ ಘೋಷಿಸದಿರುವುಕ್ಕೆ ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ.
 
ವಿಧಾನಪರಿಷತ್‌ ಅಧಿವೇಶನದಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ರೈತರ ಸಾಲ ಮನ್ನಾ ಮಾಡದಿರುವುದು ನೋಡಿದಲ್ಲಿ ಅಂತೂ ಇಂತೂ ಕುಂತಿ ಮಕ್ಕಳಿಗೆ ಅಧಿಕಾರವಿಲ್ಲ ಎನ್ನುವಂತಾಗಿದೆ ಎಂದು ಕಿಡಿಕಾರಿದ್ದಾರೆ.
 
ಎರಡು ರಾಷ್ಟ್ರೀಯ ಪಕ್ಷಗಳು ರಾಜ್ಯವನ್ನು ಗುತ್ತಿಗೆ ತೆಗೆದುಕೊಂಡಿವೆಯಾ? ಕಾಂಗ್ರೆಸ್ ಎದ್ದೇಳುತ್ತದೆ, ಬಿಜೆಪಿ ಎದ್ದೇಳುತ್ತದೆ. ಮಧ್ಯ ನಾವೇನು ಮಾಡೋದು. ರಾಷ್ಟ್ರೀಯ ಪಕ್ಷಗಳು ರಾಜ್ಯ ತಮ್ಮ ಪಕ್ಷದ ಆಸ್ತಿ ಎನ್ನುವಂತೆ ವರ್ತಿಸುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
 
ದತ್ತಾ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ನೀವು ಜೆಡಿಎಸ್‌ನವರು ಹುಬ್ಬಳ್ಳಿಯಲ್ಲಿ ಮನೆ ಮಾಡಿದ್ರೂ ಅಧಿಕಾರಕ್ಕೆ ಬರೋಲ್ಲ, ಕಲಬುರಗಿಯಲ್ಲಿ ಮನೆ ಮಾಡಿದ್ರೂ ಅಧಿಕಾರಕ್ಕೆ ಬರಲ್ಲ. ಯಾಕೆ ಸುಮ್ಮನೆ ಭ್ರಮೆಯಲ್ಲಿ ತೇಲಾಡ್ತಿರಾ ಎಂದು ತಿರುಗೇಟು ನೀಡಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ