ಯಾದಗಿರಿ: ಕನಕ ವೃತ್ತದ ಬಳಿ ಇರುವ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಬೆಂಕಿಯಿಟ್ಟುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಶುಕ್ರವಾರ (ಮೇ 23) ಮಧ್ಯರಾತ್ರಿ ಕಿಡಿಗೇಡಿಗಳು ಕಾಂಗ್ರೆಸ್ ಕಚೇರಿಗೆ ಬೆಂಕಿಯಿಟ್ಟು ಪರಾರಿಯಾಗಿದ್ದಾರೆ. ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದು, ಸ್ಥಳದಲ್ಲಿ ಪೆಟ್ರೋಲ್ ಕ್ಯಾನ್ ಪತ್ತೆಯಾಗಿದೆ.
ಬೆಂಕಿಯಿಟ್ಟಿದ್ದರಿಂದ ಕಾಂಗ್ರೆಸ್ ಕಚೇರಿಯಲ್ಲಿದ್ದ ಸೋಫಾ, ಎಸಿ ಎಲ್ಲವೂ ಬೆಂಕಿಗೆ ಅಹುತಿಯಾಗಿ ಸುಟ್ಟು ಭಸ್ಮವಾಗಿವೆ. ಯಾದಗಿರಿ ನಗರದ ಕನಕ ವೃತ್ತದ ಬಳಿಯಿರುವ ಕಾಂಗ್ರೆಸ್ ಕಚೇರಿಯನ್ನು ಬೆಳಗ್ಗೆ 11 ಸುಮಾರಿಗೆ ತೆರೆದಾಗ ಘಟನೆ ಕಂಡು ಬಂದಿದೆ.
ಕಾಂಗ್ರೆಸ್ ಕಚೇರಿಗೆ ಬೆಂಕಿ ತಗುಲಿರುವ ಘಟನೆ ತಿಳಿಸಿ ನಗರ ಪೊಲೀಸ್ ಅಧಿಕಾರಿಗಳು ಭೇಟಿ, ಪರಿಶೀಲನೆ ನಡೆಸುತ್ತಿದ್ದಾರೆ.
ಶ್ವಾನ ದ್ವಳ, ಬೆರಳಚ್ಚು ತಜ್ಞ ಸೇರಿ ಪೊಲೀಸರಿಂದ ಪರಿಶೀಲನೆ ನಡೆಯುತ್ತಿದ್ದು, ಕಾಂಗ್ರೆಸ್ ಕಚೇರಿಗೆ ಬೆಂಕಿ ಹಚ್ಚಿ ಪೆಟ್ರೋಲ್ ಕ್ಯಾನ್ ಅಲ್ಲೇ ಬಿಸಾಕಿ ಹೋದ ಕಿಡಿಗೇಡಿಗಳ ಪತ್ತೆಗೆ ಪೊಲೀಸರು ಗಾಳ ಹಾಕಿದ್ದಾರೆ.
ಕಾಂಗ್ರೆಸ್ ಕಚೇರಿ ಎದುರು ಕಾಂಗ್ರೆಸ್, ನಾಯಕರು, ಕಾರ್ಯಕರ್ತರು ಜಮಾಯಿಸಿಕೊಳ್ಳುತ್ತಿದ್ದಾರೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.