ಜಂಬೂ ಸವಾರಿ ಪುಪ್ಪಾರ್ಚನೆಗೆ ಬಾರದ ಯದುವೀರ್ ಒಡೆಯರ್: ಕಾರಣ ಹೀಗಿದೆ

Sampriya

ಶನಿವಾರ, 12 ಅಕ್ಟೋಬರ್ 2024 (18:14 IST)
Photo Courtesy X
ಮೈಸೂರು: ವಿಶ್ವವಿಖ್ಯಾತ  ನಾಡಹಬ್ಬ ದಸರಾ ಜಂಬೂ ಸವಾರಿ ಸಿಎಂ ಸಿದ್ದರಾಮಯ್ಯ ಅವರ ಪುಷ್ಪಾರ್ಚನೆಯೊಂದಿಗೆ ಆರಮಭಗೊಂಡಿತು.

ಪುಷ್ಪಾರ್ಚೆನಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್, ಜಿಲ್ಲಾ ಉಸ್ತುವಾರಿ ಎಚ್‌ ಸಿ ಮಹದೇವಪ್ಪನ ಹಾಗೂ ಅಧಿಕಾರಿಗಳ ಉಪಸ್ಥಿತಿಯಲ್ಲಿ ಪುಷ್ಪಾರ್ಚನೆ ನಡೆಸಿದರು.

ಆದರೆ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಪುಪ್ಪಾರ್ಚನೆಯಲ್ಲಿ ಪಾಲ್ಗೊಂಡಿಲ್ಲ. ಇದಕ್ಕೆ ಕಾರಣ ನವರಾತ್ರಿ  ದಿನದಂದು ತ್ರಿಷಿಕಾ ಕುಮಾರಿ ಗಂಡು ಮಗುವಿಗೆ ಜನ್ಮ ನೀಡಿದರು. ನವರಾತ್ರಿಯ ಸಂದರ್ಭದಲ್ಲಿ ಮಗು ಹುಟ್ಟಿದ ಕಾರಣದಿಂದ ಅಶುಚಿಯಾಗಿದ್ದ ರಾಜವಂಶಸ್ಥರ ಪ್ರತಿನಿಧಿ ಜಂಬೂಸವಾರಿ ಪುಷ್ಪಾರ್ಚನೆಯಲ್ಲಿ ಭಾಗಿಯಾಗಲಿಲ್ಲ.

ಅವರು ಕಂಕಣಧಾರಿಯಾಗಿಯೇ ಭಾಗವಹಿಸಬಹುದು ಎನ್ನುವ ನಿರೀಕ್ಷೆಇತ್ತು. ಅರಮನೆ ಧಾರ್ಮಿಕ ಚಟುವಟಿಕೆ ಮುಗಿದ ನಂತರ ಕಂಕಣ ವಿಸರ್ಜನೆ ಮಾಡಿದ ಒಡೆಯರ್‌ ಹತ್ತು ದಿನದ ಸೂತಕದ ಕಾರಣಕ್ಕೆ ವೇದಿಕೆ ಹತ್ತಲಲ್ಲಿ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ