ಸಂಚಾರಿ ನಿಯಮ ಜಾಗೃತಿ ಮೂಡಿಸಲು ಬಂದ ಯಮ!

ಮಂಗಳವಾರ, 10 ಜುಲೈ 2018 (17:09 IST)
ಹೆಲ್ಮೆಟ್ ಹಾಕದೇ ವಾಹನ ಚಲಾಯಿಸುವವರಿಗೆ ಟ್ರಾಫಿಕ್ ಪೊಲೀಸರು ಹಿಡಿದು ದಂಡ ವಿಧಿಸುತ್ತಾರೆ. ಆದರೆ ಅಲ್ಲಿ ಯಮ ರೂಪಿ ಪ್ರತ್ಯಕ್ಷವಾಗಿದ್ದನು. ಸಂಚಾರ ನಿಯಮ ಪಾಲನೆ ಮಾಡದೆ ಚಾಲಕರಿಗೆ ವಾರ್ನಿಂಗ್ ಕೊಡುತ್ತಿದ್ದನು.

ಸಂಚಾರಿ ನಿಯಮ ಉಲ್ಲಂಘನೆ ನಿಯಂತ್ರಣಕ್ಕೆ ಟ್ರಾಫಿಕ್ ಪೊಲೀಸರು ವಿನೂತನ ಪ್ರಯತ್ನ ನಡೆಸಿದ್ದಾರೆ. ಬೆಂಗಳೂರಿನ ಹಲಸೂರು ಗೇಟ್ ಸಂಚಾರಿ ಪೊಲೀಸರು ವಿಶೇಷ ಅಭಿಯಾನ ನಡೆಸಿದ್ದಾರೆ. ಇದರಲ್ಲಿ ಯಮನ ವೇಷ ಧರಿಸಿದ್ದ ವ್ಯಕ್ತಿ ವಾಹನಗಳ ಚಾಲಕರಿಗೆ ಸಂಚಾರಿ ನಿಯಮ ಪಾಲಿಸುವಂತೆ ಹೇಳುತ್ತಿದ್ದನು.

ಯಮನ ವೇಷ ಧರಿಸಿದ ವ್ಯಕ್ತಿ ಹೆಲ್ಮೆಟ್ ಹಾಕದೇ ಇರುವ ಸವಾರರಿಗೆ ಗುಲಾಬಿ ಹೂ ಕೊಟ್ಟು, ಜಾಗೃತಿ ಮೂಡಿಸಿ ವಾರ್ನಿಂಗ್ ಕೊಡುತ್ತಿದ್ದನು. ಯಮನ ವೇಷ ಧರಿಸಿದ್ದ ವ್ಯಕ್ತಿಯಿಂದ ನಡೆಸಿದ ಅಭಿಯಾನ ಗಮನ ಸೆಳೆಯಿತು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ