ಯಡಿಯೂರಪ್ಪ ಮತ್ತೆ ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆ - ಪ್ರಕಾಶ್‌ ಜಾವಡೇಕರ್‌

ಸೋಮವಾರ, 12 ಫೆಬ್ರವರಿ 2018 (07:14 IST)
ಬೆಂಗಳೂರು : ರಾಜ್ಯದಲ್ಲಿ ಬಿಜೆಪಿ ಸರಕಾರ ನಿಶ್ಚಿತ. ಯಡಿಯೂರಪ್ಪ ಮತ್ತೆ ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆ ಎಂದು ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಪ್ರಕಾಶ್‌ ಜಾವಡೇಕರ್‌ ಅಭಿಪ್ರಾಯಪಟ್ಟಿದ್ದಾರೆ.


ಬಿಜೆಪಿ ಮಾಧ್ಯಮ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ''ಕಾಂಗ್ರೆಸ್‌ ಈಗ ಅಧಿಕಾರದಲ್ಲಿ ಉಳಿದುಕೊಂಡಿರುವುದು ಕರ್ನಾಟಕ ಮತ್ತು ಈಶಾನ್ಯ ರಾಜ್ಯಗಳಲ್ಲಿ ಮಾತ್ರ. ಹೀಗಾಗಿ ರಾಜ್ಯದಲ್ಲಿ ಅಧಿಕಾರ ಉಳಿಸಿಕೊಳ್ಳಲು ಅದು ತನ್ನೆಲ್ಲ ಶಕ್ತಿಯನ್ನು ಬಳಕೆ ಮಾಡುತ್ತದೆ. ಕರ್ನಾಟಕ ನಮಗೆ ಸುಲಭದ ತುತ್ತಲ್ಲವಾದರೂ ಬಿಜೆಪಿ ಮರಳಿ ಅಧಿಕಾರ ಪಡೆಯುವುದು ನಿಶ್ಚಿತ. ಯಡಿಯೂರಪ್ಪ ಮತ್ತೆ ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆ. ಕಾಂಗ್ರೆಸ್‌ನಲ್ಲಿ ಗಾಂಧಿ ಪರಿವಾರ ಬಿಟ್ಟು ಬೇರೆ ಯಾರೂ ಅಧ್ಯಕ್ಷ ರಾಗಲು ಸಾಧ್ಯವಿಲ್ಲ.


ಬಿಜೆಪಿಯಲ್ಲಿ ಚಹ ಮಾರುವ ವ್ಯಕ್ತಿ ಪ್ರಧಾನಿಯಾಗಿದ್ದಾರೆ. ಸಾಧಾರಣ ರೈತನ ಮಗ ದೇಶದ ರಾಷ್ಟ್ರಪತಿಯೂ ಆಗುತ್ತಾರೆ. ಕಾಂಗ್ರೆಸ್‌ ಮುಕ್ತ ಭಾರತ ಎಂದರೆ ಎರಡು ಸಂಸ್ಕೃತಿಗಳ ನಡುವಿನ ಹೋರಾಟ. ಪರಂಪರಾಗತವಾಗಿ ಬಂದ ಸಂಪತ್ತಿನ ಅಮಲಿನಲ್ಲಿ ಕಾಂಗ್ರೆಸ್‌ ಇದೆ. ಸತತ ಶ್ರಮದಿಂದ ಬಿಜೆಪಿಯಲ್ಲಿ ಸಾಮಾನ್ಯ ಜನ ಯಾವ ಹುದ್ದೆ ಬೇಕಾದರೂ ಪಡೆಯಬಹುದೆಂಬುದಕ್ಕೆ ನರೇಂದ್ರ ಮೋದಿ, ವೆಂಕಯ್ಯ ನಾಯ್ಡು, ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಸಾಕ್ಷಿ’ ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ