ಕಿಕ್ ಬ್ಯಾಕ್ ಪ್ರಕರಣದಲ್ಲಿ ಖುಲಾಸೆ: ಯಡಿಯೂರಪ್ಪ ಬಿಗ್ ರಿಲೀಫ್

ಬುಧವಾರ, 26 ಅಕ್ಟೋಬರ್ 2016 (11:13 IST)
ಕಿಕ್ ಬ್ಯಾಕ್ ಪ್ರಕರಣದಲ್ಲಿ ಬಿ.ಎಸ್ ಯಡಿಯೂರಪ್ಪ ಖುಲಾಸೆಗೊಂಡಿದ್ದು, ಮಾಜಿ ಮುಖ್ಯಮಂತ್ರಿಗೆ ಬಿಗ್ ರಿಲೀಫ್ ಸಿಕ್ಕಿದೆ.

 
ಯಡಿಯೂರಪ್ಪ, ಅವರ ಪುತ್ರರಾದ ಬಿ. ವೈ ರಾಘವೇಂದ್ರ, ಬಿ.ವೈ ವಿಜಯೇಂದ್ರ, ಅಳಿಯ ಆರ್. ಎನ್ ಸೋಹನ್ ಕುಮಾರ್, ಜಿಂದಾಲ್ ಕಂಪನಿ ಅಧಿಕಾರಿಗಳು ಸೇರಿದಂತೆ ಪ್ರಕರಣದ ಎಲ್ಲಾ ಆರೋಪಿಗಳು ದೋಷಮುಕ್ತರೆಂದು ಸಿವಿಲ್ ಕೋರ್ಟ್ ಆವರಣದಲ್ಲಿರುವ ಸಿಬಿಐ ವಿಶೇಷ ಕೋರ್ಟ್ ತೀರ್ಪು ನೀಡಿದೆ.
 
ಸಿಬಿಐ ನ್ಯಾಯಾಲಯದ ಜಡ್ಜ್ ಆರ್. ಬಿ ಧರ್ಮಗೌಡರ್ ಈ ಮಹತ್ವದ ತೀರ್ಪನ್ನು ಪ್ರಕಟಿಸಿದ್ದು ಯಡ್ಡಿ ನಿದ್ದೆಗೆಡಿಸಿದ್ದ ಆಪಾದನೆಯಿಂದ ಅವರನ್ನು ಮುಕ್ತಗೊಳಿಸಿದ್ದಾರೆ. ಈ ಹಿಂದೆ ವಿಚಾರಣೆ ಸಂದರ್ಭದಲ್ಲಿ ಕೋರ್ಟ್ ಕಟಕಟೆಯಲ್ಲಿ  ಬಿಕ್ಕಳಿಸಿದ್ದ ಯಡ್ಡಿ ಇಂದು ಅದೇ ನ್ಯಾಯಾಲಯದಲ್ಲಿ ವಿಜಯನದ ನಗು ಬೀರಿದ್ದಾರೆ. 
 
ಸುಮಾರು 400ಪುಟಗಳ ತೀರ್ಪಿನ ಮುಖ್ಯಾಂಶಗಳನ್ನು ಓದಿದ ನ್ಯಾಯಮೂರ್ತಿ, ಬಿಎಸ್‌ವೈ ಸೇರಿದಂತೆ ಎಲ್ಲ 13 ಆರೋಪಿಗಳ ವಿರುದ್ಧದ ಆರೋಪಗಳನ್ನು ಸಾಬೀತು ಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದಿದ್ದಾರೆ.
 
ತೀರ್ಪು ಪ್ರಕಟಗೊಳ್ಳುವ ಸಂದರ್ಭದಲ್ಲಿ ಬಿಎಸ್‌ವೈ, ಪುತ್ರರು, ಅಳಿಯ, ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ, ಜಿಂದಾಲ್ ಸಂಸ್ಥೆ ಅಧಿಕಾರಿಗಳು, ಬಿಎಸ್‌ವೈ ಆಪ್ತ ರೇಣುಕಾಚಾರ್ಯ, ಅಪಾರ ಬೆಂಬಲಿಗರು ಸ್ಥಳದಲ್ಲಿ ಹಾಜರಿದ್ದರು. 
 
ಪ್ರೇರಣಾ ಟ್ರಸ್ಟ್‌ಗೆ 20 ಕೋಟಿ ರು. ಕಿಕ್ ಬ್ಯಾಕ್ ಪಡೆದ ಆರೋಪ ಯಡಿಯೂರಪ್ಪ  ಎದುರಿಸುತ್ತಿದ್ದರು. ಅದರ ಜತೆಗೆ ಇನ್ನೂ ಐದು ಪ್ರಕರಣ ಅವರನ್ನು ಸುತ್ತಿಕೊಂಡಿತ್ತು.  ಸಿಬಿಐ ವಿಶೇಷ ಕೋರ್ಟ್ ನ್ಯಾಯಾಧೀಶ ಆರ್.ಬಿ. ಧರ್ಮೇಗೌಡರ್ ಮುಂದೆ ಇಂದು ಪ್ರಕರಣಗಳದ ವಿಚಾರಣೆ ನಡೆದು ಎಲ್ಲಾ ಆರೋಪಗಳಿಂದ ಯಡಿಯೂರಪ್ಪ ಖುಲಾಸೆಯಾಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ