ಗಬ್ಬೇದ್ದು ನಾರುತ್ತಿರುವ ಯಶವಂತಪುರ ಮಾರ್ಕೆಟ್

ಶನಿವಾರ, 16 ಜುಲೈ 2022 (19:50 IST)
ರಾಜಧಾನಿಯ ಯಶವಂತಪುರದ ಎಪಿಎಂಸಿ ಮಾರ್ಕೆಟ್ ನಿನ್ನೆ ಒಂದೇ ದಿನ ಬಂದ್ ಆಗಿದಕ್ಕೆ ಗಬ್ಬೆದ್ದು ನಾರುತ್ತಿದೆ. ಕಾಲಿಡಲಾಗದ ಮಟ್ಟಿಗೆ ದುರ್ವಾಸನೆಯಿಂದ ಕೂಡಿದ್ದು, ಜನರು ಮೂಗುಮುಚ್ಚಿಕೊಂಡು ಓಡಾಡುವಂತಾಗಿದೆ. ಕೇಂದ್ರ ಸರ್ಕಾರದ ವಿರುದ್ಧ ಧರಣಿ ನಡೆಸಿದಕ್ಕೆ ಇಂದು ವರ್ತಕರು,ಮಾಲೀಕರು ಲಾಸ್ ನಲ್ಲಿರುವಂತಾಗಿದೆ. ಸೊಪ್ಪು ,ತರಕಾರಿ ಎಲ್ಲ ಕೊಳ್ಳೆತ್ತು ಹೋಗಿದ್ದು. ಅದನ್ನೇಲ್ಲ ತೆಗೆದುಕೊಂಡು ಬಂದು ರಸ್ತೆಗೆ ಸುರಿದಿದ್ದಾರೆ.ಇನ್ನು ರಸ್ತೆಯಲ್ಲಿ ವ್ಯಾಪಾರಿಗಳು ವ್ಯಾಪಾರ ಮಾಡಲಾಗದೆ, ಜನರು ಓಡಾಡಲಾಗದಂತೆ ದುರ್ವಾಸನೆಯಿಂದ ಕೂಡಿದೆ.
ಯಾವಾಗಲೂ ಜನರಿಂದ ಗಿಜಿಗುಡುತ್ತಿದ್ದ ಮಾರ್ಕೆಟ್ ನಿನ್ನೆ ಆಕ್ಷರ ಸಹ ಸ್ತಂಬ್ದವಾಗಿತ್ತು . ಜನರಿಲ್ಲದೇ ಮಾರ್ಕೆಟ್ ಬಿಕೋ ಎನ್ನುತ್ತಿತ್ತು. ನಿನ್ನೆ ಮಾರ್ಕೆಟ್ ನಲ್ಲಿದಂತಹ ಸ್ಟಾಕ್ ನ್ನ ಹಾಗೆ ಇಟ್ಟಿದ್ದು .ಇಂದು ಜನರ ಉಪಯೋಗಕ್ಕೆ ಇಲ್ಲದಂತೆ, ಮಾರಾಟ ಮಾಡಲಾಗದಂತಹ ಮಟ್ಟಿಗೆ ಕೊಳ್ಳೆತ್ತಿದೆ.ಹೀಗಾಗಿ ಗಬ್ಬ ನಾರುತ್ತಿರುವ ಮಾರ್ಕೆಟ್ ನಲ್ಲಿ ಜನರು ಓಡಾಡಲಾಗದೇ ಹಿಂಸೆ ಅನುಭವಿಸಂತಾಗಿದೆ.
 
ಇನ್ನು ಮಾರ್ಕೆಟ್ ನಲ್ಲಿ ವ್ಯಾಪಾರ ಮಾಡುವವರಿಗೆ ಒಂದು ರೀತಿಯ ಕಷ್ಟವಾದ್ರೆ , ತರಕಾರಿ ,ಇತ್ಯಾದಿ ತೆಗೆದುಕೊಳ್ಳಲು ಬರುವವರಿಗೆ ವಾಸನೆ ತಳ್ಳಲಾಗ್ತಿಲ್ಲ. ಏಕಾಏಕಿ ಟನ್ ಗಟ್ಡಲ್ಲೇ ಕಸ ಸುರಿದಿದ್ದು ಕೊಳೆತು ಕೊಳೆತು ಅಲ್ಲೇ ದುರ್ವಾಸನೆ ಬರ್ತಿದೆ. ಬಿಬಿಎಂಪಿಯವರು ಕೂಡ ಕಸ ವಿಲೇವಾರಿ ಮಾಡದೇ ಹಾಗೆ ಬಿಟ್ಟಿದ್ದಾರೆ .ಹೀಗಾಗಿ ಸಾರ್ವಜನಿಕರು ಆಕ್ರೋಶ ಹೊರಹಾಕ್ತಿದ್ದಾರೆ.ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಲು ಹೋಗಿ ಮಾರ್ಕೆಟ್ ನ್ನ ವರ್ತಕರು,ಮಾಲೀಕರು ಈಗ ಸಂಕಷ್ಟಕ್ಕೆ ಸಿಲುಕುವಂತಾಗಿದೆ.ಒಂದೇ ದಿನಕ್ಕೆ ಸಾವಿರಾರು ರೂಪಾಯಿಗಳವರೆಗೂ ನಷ್ಟ ಅನುಭವಿಸುವಂತಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ