ಕುಮಾರಸ್ವಾಮಿ, ರೇವಣ್ಣ ವಿರುದ್ಧ ಯೋಗೇಶ್ವರ್ ವಾಗ್ದಾಳಿ

ಶನಿವಾರ, 5 ಮೇ 2018 (13:47 IST)
ಚನ್ನಪಟ್ಟಣ: ಕ್ಷೇತ್ರಕ್ಕೆ ಬಂದಿರುವಂತ ಅಭ್ಯರ್ಥಿಗಳು, ಬೇರೆ ಬೇರೆ ಉದ್ದೇಶವನ್ನು ಇಟ್ಕೊಂಡು ಬಂದಿದ್ದಾರೆ. ದಯವಿಟ್ಟು ಅಂತಹ ದುಷ್ಟ ಶಕ್ತಿಗಳಿಗೆ ಅವಕಾಶ ನೀಡಬೇಡಿ ಕಮಲದ ಗುರುತಿಗೆ ಮತ ನೀಡಿ ನನ್ನನ್ನು ಜಯಶೀಲರನ್ನಾಗಿಸಿ ಎಂದು ಜೆಡಿಎಸ್ ಅಭ್ಯರ್ಥಿ, ಎಚ್. ಡಿ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಎಚ್.ಎಮ್ ರೇವಣ್ಣ ವಿರುದ್ಧ ಬಿಜೆಪಿ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ ವಾಗ್ದಾಳಿ ನಡೆಸಿದರು ‌
 ಪ್ರಾಮಾಣಿಕವಾಗಿ ಇಲ್ಲಿನ ಜನರ ಸೇವೆ ಮಾಡಲು ಬಂದಿಲ್ಲ. ರಾಜಕೀಯ ದುರುದ್ದೇಶ ಇಟ್ಕೊಂಡು ಬಂದಿರುವಂತಹ ಅಭ್ಯರ್ಥಿಗಳು. ನಾವು ಇಪ್ಪತ್ತು ವರ್ಷಗಳಿಂದ ಶಾಂತಿ ನೆಮ್ಮದಿಯಿಂದ ಅಣ್ಣ, ತಮ್ಮಂದಿರಂತೆ ವಾಸ ಮಾಡಿದ್ದೇವೆ. ಭವಿಷ್ಯದಲ್ಲಿ ಜೆಡಿಎಸ್ ಆಡಳಿತಕ್ಕೆ ಬಂದರೆ ಆ ದೌರ್ಜನ್ಯ ದಬ್ಬಾಳಿಕೆಯನ್ನ ನೀವು ತಡೆದು ಕೊಳ್ಳಲು ಆಗುವುದಿಲ್ಲ. ಈಗಾಗಲೆ ಕೆಲ ಗ್ರಾಮಗಳಲ್ಲಿ ಹೊಡೆದಾಟ, ದೌರ್ಜನ್ಯ ಎಸಗಿದ್ದಾರೆ. ನಾನು ಇದುವರೆಗು ಇಂತದಕ್ಕೆಲ್ಲ ಕಡಿವಾಣ ಹಾಕಿ ಅವಕಾಶ ನೀಡಿರಲಿಲ್ಲ.
 
ರಾಮನಗರ ಜಿಲ್ಲೆ ಚನ್ನಪಟ್ಟಣ ಕ್ಷೇತ್ರ ದಿನದಿಂದ ದಿನಕ್ಕೆ ಜಿದ್ದಾಜಿದ್ದಿಯ ಕಣವಾಗ್ತಿದೆ. ಒಂದೆಡೆ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಜೆಡಿಎಸ್ ಪಕ್ಷದಿಂದ ಕಣದಲ್ಲಿದ್ರೆ ಮತ್ತೊಂದೆಡೆ ಸಾರಿಗೆ ಸಚಿವ ಎಚ್.ಎಮ್ ರೇವಣ್ಣ ಕಾಂಗ್ರೆಸ್ ನಿಂದ ಸ್ಪರ್ದೆಗಿಳಿದಿದ್ರೆ ಇನ್ನು ಬಿಜೆಪಿಯಿಂದ 
ಹ್ಯಾಟ್ರಿಕ್ ಬಾರಿಸಿ ಐದನೆ ಬಾರಿ ಸಿ.ಪಿ ಯೋಗೇಶ್ವರ್ ಕಣದಲ್ಲಿದ್ದಾರೆ. 
 
ಮೂವರ ಪೈಪೋಟಿ ಜಿದ್ದಾ ಜಿದ್ದಿಯಿಂದ ಕೂಡಿದೆ ಅಂತ ನಾವು ತಿಳ್ಕೊಂಡ್ರೆ ಯೋಗೇಶ್ವರ್ ಮಾತ್ರ ಇದು ನನ್ನನ್ನ ಸೋಲಿಸಲು ರಾಜಕೀಯ ತಂತ್ರಗಾರಿಕೆಯನ್ನ ಮಾಡ್ತಿದ್ದಾರೆ. ಎಚ್.ಡಿ. ಕುಮಾರಸ್ವಾಮಿ ಜಾತಿ ಆಧಾರದ ಮೇಲೆ ಮತಯಾಚನೆ ಮಾಡ್ತಿದ್ದಾರೆ. ಇನ್ನೋಂದ್ಕಡೆ ಕಾಂಗ್ರೆಸ್ ನಿಂದ ಸ್ಪರ್ದೆ ಮಾಡ್ತಿರೊ ರೇವಣ್ಣನವರು ಡಿ.ಕೆ.ಶಿವಕುಮಾರ್ ಅವರ ಕುಮ್ಮಕ್ಕಿನಿಂದ ಮತ ಹೊಡೆಯಲು ತಂತ್ರಗಾರಿಕೆಯನ್ನ ನಡೆಸಿದ್ದಾರೆ.

ಇವರಿಬ್ಬರು ನಮ್ಮ ತಾಲೂಕಿನವರಲ್ಲ. ಕೇವಲ ಚುನಾವಣೆಗೆ ಬಂದಿರೋರು. ನಾನು ಇಲ್ಲಿಯವನು ನಿಮ್ಮ ಸೇವೆ ಮಾಡುತ್ತಾ ಬಂದಿದ್ದೇನೆ. ಬಿಜೆಪಿ ಪಕ್ಷ ಆಡಳಿತಕ್ಕೆ ಬಂದ್ರೆ , ನಾನು ಸಚಿವನಾಗ್ತೇನೆ. ಇನ್ನು ಸಾಕಷ್ಟು ಅಭಿವ್ರದ್ದಿಯನ್ನ ಮಾಡ್ತೇನೆ ಎಂದು ಬಿಜೆಪಿ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ ಮತದಾರರ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ