ಬೆಂಗಳೂರು ಒನ್ ನಲ್ಲಿ ಇನ್ನು ಕಸ ಹಾಕಬಹುದು!

ಮಂಗಳವಾರ, 11 ಏಪ್ರಿಲ್ 2017 (11:38 IST)
ಬೆಂಗಳೂರು: ನಮ್ಮ ಬೆಂಗಳೂರಿನಲ್ಲಿ ಕಸ ವಿಲೇವಾರಿಯದ್ದೇ ಚಿಂತೆ. ದೆಹಲಿ ಮತ್ತು  ಮುಂಬೈ ನಂತರ ಅತೀ ಹೆಚ್ಚು ಕಸ ಉತ್ಪಾದನೆಯಾಗುವ ನಗರ ಬೆಂಗಳೂರು. ಬೆಂಗಳೂರಿನ ಕಸ ಸಮಸ್ಯೆಗೆ ಒಂದು ಹೊಸ ಪರಿಹಾರ ಕಂಡುಕೊಳ್ಳಲಾಗಿದೆ.

 

ಬೆಂಗಳೂರು ಒನ್ ನಲ್ಲಿ ಕಸ ವಿಲೇವಾರಿ ಮಾಡುವ ಹೊಸದೊಂದು ಯೋಜನೆಯೊಂದಕ್ಕೆ ಎರಡು ಸರ್ಕಾರೇತರ ಸಂಸ್ಥೆಗಳು, ಪೋಸ್ಟ್ ಆಫೀಸ್ ಮತ್ತು ಬೆಂಗಳೂರು ಒನ್ ಸಹಯೋಗದಲ್ಲಿ ಚಾಲನೆ ನೀಡಿದೆ.

 
ಅದರಂತೆ ಬೆಂಗಳೂರು ದಕ್ಷಿಣದಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದೆ. ಬೆಂಗಳೂರು ಒನ್, ಪೋಸ್ಟ್ ಕಚೇರಿಯಲ್ಲಿ ಪ್ರತ್ಯೇಇಕ ಬಾಕ್ಸ್ ಇಡಲಾಗಿದೆ. ಆದರೆ ಕಸ ಎಂದಾಕ್ಷಣ ಮನೆಯಲ್ಲಿರುವ ಹಸಿ-ಒಣ ಕಸ ತಂದು ಸುರಿಯಬೇಡಿ.

ಇ ತ್ಯಾಜ್ಯ ವಿಲೇವಾರಿಗೆ ಮಾತ್ರ ಇಲ್ಲಿ ಅವಕಾಶ. ಹಳೇ ಎಲೆಕ್ಟ್ರಾನಿಕ್ಸ್ ಐಟಂಗಳನ್ನು ಬಿಸಾಕಬೇಕೆಂದಿದ್ದರೆ, ಇಲ್ಲಿ ಸುರಿಯಬಹುದು. ಬೆಂಗಳೂರು ದಕ್ಷಿಣದಲ್ಲಿ 12 ಬಾಕ್ಸ್ ಇಡಲಾಗಿದ್ದು, ಇದರಿಂದ 1.2 ಟನ್ ಇ ತ್ಯಾಜ್ಯ ಸಂಗ್ರಹವಾಗಿದೆ ಎಂದು ಸಂಘಟನೆ ಹೇಳಿಕೊಂಡಿದೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ