ಬಿಜೆಪಿ ಹೆಡ್ ಕ್ವಾಟರ್ಸ್ ಗೆ ನೀವು ಸಂದೇಶ ತಲುಪಿಸಬೇಕು- ಡಿಕೆಶಿ
ಡಿಕೆ ಶಿವಕುಮಾರ್ ಅಮಿತ್ ಶಾ ಅಂತವರು ವಿಧನಾಸಭಾ ಕ್ಷೇತ್ರಗಳಲ್ಲಿ ಹೋಗಿ ಪ್ರಚಾರ ಮಾಡುತ್ತಿದ್ದಾರೆ .ಪಕ್ಷದ ಅಧ್ಯಕ್ಷರಾದಂತವರು ಸ್ಥಳೀಯ ಮಟ್ಟದಲ್ಲಿ ಪ್ರಚಾರ ಮಾಡುತ್ತಿದ್ದಾರೆ.ಮಾಡಲಿ ಬೇಡಾ ಅನ್ನುವುದಿಲ್ಲ ಅಂದ್ರೆ ಅವರ ಮಾಡಿದ ತಪ್ಪುಗಳನ್ನ ಸರಿಪಡಿಸಿಕೊಳ್ಳುತ್ತಿದ್ದಾರೆ .ಬಿಜೆಪಿ ಸರ್ಕಾರದ ಬಜೆಟ್ ಬಂದಿದೆ ಅವರು ಆ ಬಜೆಟ್ ನಲ್ಲಿ ರಾಜ್ಯದ ಜನರಿಗೆ ಏನು ಕೊಟ್ಟಿಲ್ಲ .ರಾಜ್ಯದ ಜನರಿಗೆ ಕಿವಿ ಮೇಲೆ ಹೂ ಇಟ್ಟಿದ್ದಾರೆ .ಅದಕ್ಕೆ ಶಾಸಕರೆಲ್ಲರೂ ನಾವು ಅಧಿವೇಶನದಲ್ಲಿ ಕಿವಿ ಮೇಲೆ ಹೂವು ಇಟ್ಟು ಪ್ರತಿಭಟನೆ ಮಾಡಿದಿವಿ.ತಮ್ಮಯ್ಯ ಅವರು ಇವತ್ತು ನಮ್ಮ ಪಕ್ಷಕ್ಕೆ ಸೇರುತ್ತಿದ್ದಾರೆ.ಬಿಜೆಪಿ ಹೆಡ್ ಕ್ವಾಟರ್ಸ್ ಗೆ ನೀವು ಸಂದೇಶವನ್ನ ತಲುಪಿಸಬೇಕು .ಸ್ಥಳಿಯ ಮಟ್ಟದಲ್ಲಿ ನಿವೇಲ್ಲ ಸದಸ್ಯ ಸ್ಥಾನವನ್ನ ಹೆಚ್ಚಿಗೆ ಮಾಡಬೇಕು ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.