ಸಿದ್ದರಾಮಯ್ಯ , ಡಿಕೆಶಿ ಸುರ್ಜೆವಾಲಾಗೆ ಸವಾಲ್ ಹಾಕಿದ ರೇಣುಕಾಚಾರ್ಯ

ಗುರುವಾರ, 16 ಫೆಬ್ರವರಿ 2023 (14:21 IST)
ಸಿದ್ದರಾಮಯ್ಯ , ಡಿಕೆ ಸುರ್ಜೆವಾಲಾಗೆ ಸವಾಲ್ ಹಾಕ್ತೇನೆ ೪0% ಕಮಿಷನ್ ಬಗ್ಗೆ ಮಾತಾಡ್ತೀರಾ.ನಿಮಗೆ ತಾಕತ್ ನೈತಿಕತೆ ಇದ್ರೆ ದಾಖಲೆ ಬಿಡುಗಡೆ ಮಾಡಿ ಎಂದು ರೇಣುಕಾ ಚಾರ್ಯ ಸವಾಲ್ ಹಾಕಿದ್ದಾರೆ.
 
ಭ್ರಷ್ಟಾಚಾರ ಹುಟ್ಟಿದ್ದೆ ಕಾಂಗ್ರೆಸ್‌‌ನಿಂದ.ನಾಚಿಕೆ ಆಗಲ್ವ ನಿಮಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡ್ತೀರ.ಯಾವ ಪುರುಷಾರ್ತಾಕ್ಕಾಗಿ ಎಸಿಬಿ ಮಾಡಿದ್ದೀರ.ನಿಮ್ಮ ಮೇಲಿನ ಭ್ರಷ್ಟಾಚಾರ ಮುಚ್ಚಿಹಾಕಲು ಎಸಿಬಿ ಮಾಡಿದ್ರೆ ,ನಿಮ್ಮ ಭ್ರಷ್ಟಾಚಾರದ ತನಿಖೆ ಮಾಡಿದ್ರೆ ಸಾಲು ಸಾಲಾಗಿ ಜೈಲಿಗೆ ಹೋಗ್ತೀರಿ .ಮತ್ತೊಮ್ಮೆ ರಾಜ್ಯದಲ್ಲಿ ಅಧಿಕಾರಕ್ಕೆ ನಾವು ಬಂದೇ ಬರ್ತೀವಿ.ಸಮಾಜ ಕಲ್ಯಾಣ ಇಲಾಖೆಯಲ್ಲಿ ವಿಜಯ ಬ್ಯಾಂಕ್ ಅಂತ ಇತ್ತು.ಅಲ್ಲಿ ಹಾಸಿಗೆ ದಿಂಬು ಭ್ರಷ್ಟಾಚಾರ ನಡೆದಿದೆ.ಕೆಂಪಣ್ಣ ಯಾರು, ನಿಮ್ಮ ಏಜೆಂಟ್ ,ನಿಮ್ಮ ಮನೆಯಲ್ಲಿ ಡ್ರಾಫ್ಟ್ ಮಾಡಿಸಿ ಕೆಂಪಣ್ಣನಿಗೆ ಕೊಡ್ತೀರಿ .ನಿಮ್ಮ ಕನಸು ಭಗ್ನ ಪ್ರೇಮಿಗಳ ಕನಸು.ಕಾಂಗ್ರೆಸ್ 50 ಸೀಟು ಬರೋದಿಲ್ಲ ಎಂದು ರೇಣುಕಾಚಾರ್ಯ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
 
ಈ ವೇಳೆ ಅಶ್ವಥ್ ನಾರಾಯಣ್ ಟಿಪ್ಪು ಬಗ್ಗೆ ಮಾತನಾಡಿದ್ದಾರೆ ಸಿದ್ದರಾಮಯ್ಯ ಬಗ್ಗೆ ಮಾತನಾಡಿಲ್ಲ.ರಾಜಕಾರಣದಲ್ಲಿ ಆರೋಪ ಪ್ರತ್ಯಾರೋಪ ಸಾಮಾನ್ಯ.ಆದ್ರೆ ಅವರು ಮಾತನಾಡಿರೋ ಬಗ್ಗೆ ನನಗೆ ಮಾಹಿತಿ ಇಲ್ಲ.ಟಿಪ್ಪು ಒಬ್ಬ ಮತಾಂದ .ರಾಜ್ಯದಲ್ಲಿ ಬಿಜೆಪಿ 140 ಕ್ಕೂ ಅಧಿಕ ಕ್ಷೇತ್ರದಲ್ಲಿ ಬರುತ್ತೆ.ಯಡಿಯೂರಪ್ಪನವರು ಮೇರು ನಾಯಕ.ಅವರ ಮಾರ್ಗದರ್ಶನದಲ್ಲಿ ನಾವು ಮುಂದಿನ ಚುನಾವಣೆಗೆ ಹೋಗ್ತೇವೆ ಎಂದು ಹೇಳಿದ್ರು.ಅಲ್ಲದೇ ಈ ವೇಳೆ ಫ್ರೀಡಂ ಪಾರ್ಕ್‌ನಲ್ಲಿ ಹತ್ತಾರು ಸಂಘಟನೆಗಳ ಪ್ರತಿಭಟನೆ ವಿಚಾರವಾಗಿಯೂ ಪ್ರತಿಕ್ರಿಯಿಸಿದ್ದು,ಎಲ್ಲಾ ಸಂಘಟನೆಗಳಿಗೂ ಸಮುದಾಯಗಳಿಗೂ ಮುಖ್ಯಮಂತ್ರಿಗಳು ನ್ಯಾಯ ಕೊಡ್ತಾರೆ ಎಂದು ರೇಣುಕಾಚಾರ್ಯ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ