ಧೂಮಪಾನಿಯರೇ ಎಚ್ಚರ..! ಎಚ್ಚರ..!

ಬುಧವಾರ, 30 ನವೆಂಬರ್ 2022 (19:37 IST)
ಕೊರೊನಾ ಕಾಲಘಟದಲ್ಲಿ ಕೊಂಚ ಕಡಿಮೆಯಾಗಿದ್ದ  ಕ್ಯಾನ್ಸರ್ ಈಗ ಮತ್ತೆ ಜೀವ ತಗೆಯುತ್ತಿದೆ.. ಬದಲಾದ ಜೀವನ ಶೈಲಿ ಹಾಗೂ ಧೂಮಪಾನ್ ಕಿಕ್ ಏರಿಸಿಕೊಳೊ ಯುವ ಜನರಿಗೆ ಸ್ಮಾಲ್ ಸೆಲ್ ಲಂಗ್ಸ್ ಕ್ಯಾನ್ಸರ್ ಕಾಡ್ತೀದೆ.ಬದಲಾದ ಜೀವನ ಶೈಲಿ ಒತ್ತಡದ ಲೈಫ್ ನಿಂದ ಪಾರಗಲು ಯುವ ಜನತೆ ಇತ್ತಿಚ್ಚಿನ ದಿನಗಳಲ್ಲಿ ಧೂಮಪಾನದ ಚಟ್ಟಕ್ಕೆ ದಾಸಾನೂದಾಸರಾಗುತ್ತಿದ್ದು  ಮೀತಿ ಮಿರಿದ ಧುಮಪಾನದ ವೆಸನದ ಚಟಗಳಿಗೆ ಬಲಿಯಾಗುತ್ತಿದ್ದಾರೆ ಅದರಲ್ಲಿಯೂ ಧೂಮಪಾನ ಕ್ಯಾನ್ಸರ್ ಗೆ ಕಂಟಕವಾಗ್ತೀದ್ದು ಜನರ ಜೀವ ತಗೆಯುತ್ತಿದೆ .. ಕಳೆದೊಂದು ವರ್ಷದಲ್ಲಿ ಧೂಮಪಾನಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗ್ತೀದ್ದು.. ಇದೇ ಧೂಮಪಾನ ಚಟ ಜೀವ ತಗೆಯುವ ಸ್ಮಾಲ್ ಲಂಗ್ಸ್ ಕ್ಯಾನ್ಸರ್ ಗೆ ಕಾರಣವಾಗ್ತೀರೊ ಅಚ್ಚರಿಯ ಅಂಶವನ್ನ ವೈದ್ಯರು ಹೊರ ಹಾಕಿದ್ದಾರೆ.

ಕೊರೊನಾ ಬಳಿಕ ಧೂಮಪಾನಿಯರನ್ ಇನ್ನಲ್ಲದಂತೆ ಕಾಡುತ್ತಿದೆ ಸ್ಮಾಲ್ ಸೆಲ್ ಲಂಗ್ಸ್ ಕ್ಯಾನ್ಸರ್.. ಹೌದು ಲಂಗ್ಸ್ ಕ್ಯಾನ್ಸರ್ ಗೆ ತುತ್ತಾಗುವ ಶೇ 60% ಧೂಮಪಾನಿಯರಲ್ಲಿ ಸ್ಮಾಲ್ ಸೆಲ್ ಲಂಗ್ಸ್ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದೆ.. ಅತಿ ಚಿಕ್ಕ ವಯಸ್ಸಿನವರಲ್ಲಿಯೇ ಅಂದ್ರೆ 25 ರಿಂದ 30 ವಯಸ್ಸಿನ ವಯಸ್ಕರಲ್ಲಿಯೇ ಶ್ವಾಸಕೋಶದ ಕ್ಯಾನ್ಸರ್ ಕಾಣಸಿಕೊಳ್ಳುತ್ತಿದೆ..  ಸ್ಮಾಲ್ ಸೆಲ್ ಲಂಗ್ಸ್ ಕ್ಯಾನ್ಸರ್ ಅತಿ ತೀವ್ರ ಸ್ವರೂಪದಲ್ಲಿ ಮನುಷ್ಯನ ದೇಹಕ್ಕೆ ಅಟ್ಯಾಕ್ ಮಾಡುತ್ತಿದ್ದು ಪ್ರಾರಂಭಿಕ ಹಂತದಲ್ಲಿ ಈ ಸ್ಮಾಲ್ ಸೆಲ್ ಲಂಗ್ಸ್ ಕ್ಯಾನ್ಸರ್ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡದೆ ಹೋದ್ರೆ ದೇಹದ ಇತರೆ ಅಂಗಾಂಗಳಿಗೆ ಈ ಕ್ಯಾನ್ಸರ್ ಅತಿ ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿದ್ದ. 

ಕಳೆದ ಕೆಲವು ತಿಂಗಳುಗಳಿಂದ ಸ್ಮಾಲ್ ಸೆಲ್ ಲಂಗ್ಸ್ ಕ್ಯಾನ್ಸರ್  ಶೇ 25-30 %  ಧೂಮಪಾನಿಯ ವ್ಯಸನಿಗಳಲ್ಲಿ ಹೆಚ್ಚಾಗಿದೆ. ಇನ್ನು ಸ್ಮಾಲ್ ಸೆಲ್ ಲಂಗ್ಸ್ ಕ್ಯಾನ್ಸರ್ ಪತ್ತೆಯಾದ ತಕ್ಷಣಕ್ಕೆ ಸೂಕ್ತ ಚಿಕಿತ್ಸೆ ಸಿಗ್ದೆ ಇದ್ರೆ ಸಾವಿನ ಸಾಧ್ಯತೆಯ ಬಗ್ಗೆಯೂ ವೈದ್ಯರು ಎಚ್ಚರಿಕೆ ನೀಡಿದ್ದು.. ಹೀಗಾಗಿ ಬೆಂಗಳೂರಿನಂತ ಸಿಟಿಯಲ್ಲಿ ಹೆಚ್ಚಾದ ವಾಯುಮಾಲಿನ್ಯದ ಜೊತೆಗೆ ಈ ಧೂಮವ್ಯಸನ ಚಟ್ಟಕ್ಕೆ ತುತ್ತಾದ ಯುವ ಜನರಿಗೆ ಶ್ವಾಸಕೋಸದ ಕ್ಯಾನ್ಸರ್ ಕಾಡ್ತಿದ್ದು ಲಂಗ್ಸ್ ಕ್ಯಾನ್ಸರ್  ಏರಿಕೆಗೆ ಕಾರಣವಾಗ್ತೀರೊ ಬಗ್ಗೆ ಎಚ್ಚರಿಕೆ ನೀಡ್ತೀದ್ದಾರೆ. 

ಎದೆಯಲ್ಲಿ ನೋವು ಕಾಣಿಸುವುದು, ನಿರಂತರವಾದ ಕೆಮ್ಮು, ಕೆಮ್ಮುವಾಗ ರಕ್ತ ಹೊರ ಬರುವುದು ಅಥವಾ ಎಂಜಲಿನಲ್ಲಿ ಕಂದು ಬಣ್ಣದ ದ್ರವ ಕಾಣಿಸುವುದು ಉಸಿರಾಡಲು ಕಷ್ಟ ಆಗುವುದು , ದಮ್ಮು ದೇಹದ ತೂಕ ಕಡಿಮೆ ಆಗುವುದು ಧ್ವನಿಯಲ್ಲಿ ಬದಲಾವಣೆ ಕಾಣುವುದು ಆಹಾರವನ್ನು ಸೇವಿಸುವಾಗ ಅಥವಾ ನೀರು ಕುಡಿಯುವಾಗ ಗಂಟಲಿನ ಬಳಿ ಕಷ್ಟವಾಗುವುದು ಮುಖ ಮತ್ತು ಕುತ್ತಿಗೆ ಭಾಗದಲ್ಲಿ ಊತ ಕಾಣಿಸಿಕೊಳ್ಳುವುದು ಈ ರೀತಿ ಲಕ್ಷಣಗಳು ಕಂಡು ಬರುತ್ತವೆ ಅತಿಯಾದ ಧೂಮೊಪಾನ ಜೀವ ತಗೆಯುತ್ತಿದ್ದು ಯುವಕರು ಹೆಚ್ಚು ಎಚ್ಚರಿಕೆ ವಹಿಸಬೇಕಿದೆ. ಇನ್ನಾದ್ರೂ ಯುವಜನತೆ ಇತಂಹ ಚಟಕ್ಕೆ ಬಲಿಯಾಗುವ ಮುನ್ನ ಎಚ್ಚೆತ್ತುಕೊಳ್ಳಬೇಕಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ