ಯುವ ಜನರಿಗೆ ಹೆಚ್ಚು ಹೃದಯಾಘಾತ-ಶೇಕಡಾ 15% ಯುವ ಜನರು ಸಾವು ಹೆಚ್ಚಳ

ಭಾನುವಾರ, 12 ಮಾರ್ಚ್ 2023 (19:19 IST)
ಕೋವಿಡ್ ನಂತರ ರಾಜ್ಯದಲ್ಲಿ ತೀರಾ ಚಿಕ್ಕವಯಸ್ಸಿನವರೂ ಇತ್ತಿಚಿನ ದಿನಗಳಲ್ಲಿ ಹೃದಯಾಘಾತದಿಂದ ಸಾವಿಗಿಡಾಗುತ್ತಿದ್ದಾರೆ. ಕೋವಿಡ್ ಸೋಂಕಿನ  ಬಳಿಕ ಚೇತರಿಸಿಕೊಂಡ ನಂತರ ಹೃದಯಸ್ತಂಭನದಿಂದ ಸಾವು ಅಗುತ್ತಿರುವ ಪ್ರಕರಣಗಳು ಇತ್ತಿಚಿಗೆ ಹೆಚ್ಚಾಗುತ್ತಿವೆ.ಶೇ. 50 ರಷ್ಟು ಜನರು ಧೂಮಪಾನ ಮಾಡದವರೆ ಬಹುತೇಕ ಜನರು  ಹೃದಯಾಘಾತದಿಂದ ಸಾವನಪ್ಪುತ್ತಿದ್ದಾರೆ ಆದರೆ ಅಂದಾಜಿನ ಪ್ರಕಾರ ಕೋವಿಡ್ ಬಳಿಕ ಹೃದಯ ಸ್ತಂಭನ ಪ್ರಕರಣಗಳಲ್ಲಿ ಶೇ.೧೦ ರಿಂದ ೧೫ ರಷ್ಟು ಹೆಚ್ಚಳ ಕಂಡುಬಂದಿದೆ ಕೋವಿಡ್ ಸೋಂಕಿಗೆ ತುತ್ತಾಗಿದ್ದವರು ತಮ್ಮ ವಯಸ್ಸು ಎಷ್ಟೇ ಆಗಿರಲಿ ಅಥವಾ ದೈಹಿಕವಾಗಿ ಎಷ್ಟೇ ಫೀಟ್ ಆಗಿರಲಿ ಉಸಿರಾಟ ಸಮಸ್ಯೆಯಂತಹ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು.
 
 ಕೊರೋನಾ ವೃರಸ್ ಸೋಂಕಿಗೆ ಒಳಗಾಗಿರುವ ವ್ಯಕ್ತಿಗಳಲ್ಲಿ ಸಾವು  ಹಾಗೂ ಹೃದಯ ಸ್ತಂಭನ ಪಾರ್ಶ್ವವಾಯು ಸ್ವಾತ ಕೋಶ ಸಮಸ್ಯೆ ಅಪಾಯದ ಸಾಧ್ಯತೆಗಳು ಹೆಚ್ಚಿವೆ. ಕೋವಿಡ್ ಇತಿಹಾಸ ಹೊಂದಿರುವ ವಧ್ಯವಯಸ್ಕರು ಹಾಗೂ ವಯೋವೃದ್ದರೂ ಅಧಿಕ  ರಕ್ತದೊತ್ತಡ ಬೊಜ್ಜು .ಕೊಲೆಸ್ಟ್ರಾಲ್ ಮೇಲೆ ನಿಗಾ ಇಡಬೇಕು ಅಸಾಮಾನ್ಯ ರೀತಿಯಲ್ಲಿ ವಿಪರೀತ ವ್ಯಾಯಾಮ ಮಾಡಬಾರದು. ಏಕೆಂದರೆ ಇಂತಹ ಕಸರತ್ತಿನ ವೇಳೆಯೇ ಹಲವು ಸಾವುಗಳು ಸಂಭವಿಸುತ್ತಿವೆ.ಹೀಗೆಂದು ಸಂಶೋಧನಾ ವರದಿಯೊಂದು ಹೇಳಿದೆ.
 
ಕೋವಿಡ್ ಇಷ್ಟು ದಿನ ಎಲ್ಲರಿಗೂ ಕಾಡಿತ್ತು ಆದ್ರಿಗ ಕೋವಿಡ್ ನಂತರ ಅದರ ಎಫೆಕ್ಟ್ ಯುವಜನರ ಮೇಲೆ ಬಿರುತ್ತಿದೆ. ಹೀಗಾಗಿ ಇಂದಿನ ಯುವ ಜನತೆ ಎಚ್ಚರಿಕೆ ಇರುವುದು ಅನಿವಾರ್ಯವಾಗಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ