ರಾಜ್ಯ ಹಾಗೂ ರಾಜ್ಯಧಾನಿಯಲ್ಲಿ ಹೆಚ್ಚಾದ ಬಿಸಿಗಾಳಿ…!

ಭಾನುವಾರ, 12 ಮಾರ್ಚ್ 2023 (19:14 IST)
ರಾಜ್ಯದಲ್ಲಿ ಎಲೆಕ್ಷನ್ ಬಿಸಿಯ ಜೊತೆ ಜೊತೆಗೆ ಬಿಸಿಲಿನ ಕಾವು ಕೂಡ ಹೆಚ್ಚಾಗ್ತಿದೆ , ರಾಜ್ಯ ರಾಜಧಾನಿಯಲ್ಲಿ ಬೇಸಿಗೆ ಕಾಲ ಹತ್ತಿರ ಬರುತ್ತಿದ್ದಂತೆ ಬಿಸಿಗಾಳಿ ಹೆಚ್ಚಾಗಿದೆ. ಇನ್ನೂ ಬಿಸಿಗಾಳಿ ಹೆಚ್ಚಾಗಿ ಆರೋಗ್ಯದ ಮೇಲೆ ಪ್ರಭಾವ ಬೀರುವ ಬಗ್ಗೆ ಮುನ್ನೆಚ್ಚರಿಕೆ ವಹಿಸಲು ಆರೋಗ್ಯ ಇಲಾಖೆ ಸೂಚನೆ ಹೊರಡಿಸಿದೆ.
 
ರಾಜ್ಯದಲ್ಲಿ ಎಲೆಕ್ಷನ್ ನ ಬಿಸಿ ಒಂದೆಡೆ ಆದ್ರೆ , ವಾತಾವರಣದಲ್ಲಿ ಬಿಸಿಗಾಳಿ ಹೆಚ್ಚಾಗುತ್ತಿರುವುದು  ಇನ್ನೊಂದೆಡೆ. ಹೌದು ರಾಜ್ಯ ರಾಜಧಾನಿಯಲ್ಲಿ ಕಳೆದ ಎರಡು ದಿನಗಳಿಂದ ಬೇಸಿಗೆಯ ಧಗೆ ಇನ್ನಷ್ಟೂ ಹೆಚ್ಚಾಗಿದೆ ,ಇನ್ನೂ ಬೆಂಗಳೂರಿಗರನ್ನು  ಉಸಿರುಗಟ್ಟುವಂತಹ ಸ್ಥಿತಿಗೆ ಈ ಬಿಸಿಗಾಳಿ ಧುಕಿದೆ. ಇನ್ನು ಉಷ್ಣಾಂಶದಿಂದ ನಾನಾ ರೀತಿಯ ಅನಾರೋಗ್ಯ ಪರಿಸ್ಥಿತಿಗಳು ಸಂಭವಿಸುವ ಸಾಧ್ಯತೆಯಿರುವುದರಿಂದ ಬೇಸಿಗೆ ಕಾಲದ ಬಗ್ಗೆ ಮುನ್ನೆಚ್ಚರಿಕೆ ವಹಿಸಲು ಆರೋಗ್ಯ ಇಲಾಖೆ ಹಲವು ಸಲಹೆಗಳೊಂದಿಗೆ ಸುತ್ತೋಲೆ ಹೊರಡಿಸಿದೆ. 
 
-ಆರೋಗ್ಯ ಇಲಾಖೆ ಹೊರಡಿಸಿರುವ ಸುತ್ತೋಲೆಯಲ್ಲಿರುವ ಸಲಹೆಗಳೇನು…? 
-ಬಾಯಾರಿಕೆ ಇಲ್ಲದಿದ್ದರೂ ಪದೇ ಪದೇ ನೀರು ಕುಡಿಯಬೇಕು…!
-ಪ್ರಯಾಣ ಸಮಯದಲ್ಲೂ ನೀರು ತೆಗೆದುಕೊಂಡು ಹೋಗಬೇಕು…!
-ಹಣ್ಣು ಮತ್ತು ತರಕಾರಿಗಳನ್ನು ಹೆಚ್ಚು ಸೇವಿಸಬೇಕು….!
-ಹತ್ತಿ ಬಟ್ಟೆ ಧರಿಸುವುದು ಉತ್ತಮ…!
 
ಇನ್ನೂ ಬೆಂಗಳೂರಿನಲ್ಲಿ ಮುಂದಿನ 48 ಗಂಟೆಗಳಲ್ಲಿ ಮೇಲ್ಮೈಬಿಸಿ ಗಾಳಿ ಬೀಸುವ ಸಾಧ್ಯತೆಯಿದೆ, ಎಂದು ಭಾರತೀಯ ಹವಾಮಾನ ಇಲಾಖೆ ಕೂಡ ಎಚ್ಚರಿಕೆ ನೀಡಿದೆ. ಸದ್ಯ ಉಷ್ಣಾಂಶವು ಗರಿಷ್ಠ 32 ಡಿಗ್ರಿ ಸೆಲಿಯಸ್ಸ್ ಇರುವುದಿಂದ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿ ನಾನಾ ಕಾಯಿಲೆಗಳು ಬರುವ ಸಾದ್ಯತೆಯಿರುವುದರಿಂದ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡು ಜನರ ಆರೋಗ್ಯ ಕಾಪಡಿಕೊಳ್ಳುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಗೈಡ್ ಲೈನ್ಸ್ ಹೊರಡಿಸಿದೆ. ಜನ  ಕೂಡ ದೇಹದಲ್ಲಿ ನೀರಿನ ಅಂಶ ಹೆಚ್ಚಾಸಿ  ಆರೋಗ್ಯ ಕಾಪಾಡಿಕೊಂಡು ,ಬಿಸಿಲಿಗೆ ದಾಹ ತೀರಿಸಿಕೊಳ್ಳಲು  ಹಣ್ಣು ಮತ್ತು ಜ್ಯೂಸ್ ಗಳು ಮೊರೆ ಹೋಗುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ