ಮೈಸೂರು– ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೈತಪ್ಪಿದ ನೋವಲ್ಲಿ ಈಚೆಗೆ ಸಂಸದ ಪ್ರತಾಪ್ ಅವರು ಯದುವೀರ್ ವಿರುದ್ಧ ಹೇಳಿಕೆ ನೀಡಿದ್ದರು. ಹೈಕಮಾಂಡ್ ಮಧ್ಯಪ್ರವೇಶದ ಬಳಿಕ ತಣ್ಣಗಾದ ಬಳಿಕ ಬಿಜೆಪಿ ಟಿಕೆಟ್ ಯಾರಿಗೂ ಕೊಟ್ಟರೂ ನಾನು ಬೆಂಬಲಿಸುತ್ತೇನೆ ಎಂದಿದ್ದರು. ಬಿಜೆಪಿ ಟಿಕೆಟ್ ಯದುವೀರ್ ಅವರಿಗೆ ಘೋಷಣೆಯಾಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಶುಭಕೋರಿದ್ದ ಅವರು ಈಗಿನಿಂದಲೇ ಪ್ರಚಾರ ಕಾರ್ಯ ಶುರು ಮಾಡೋಣ ಎಂದು ಆಹ್ವಾನಿಸಿದ್ದರು.
ಪತ್ರಕರ್ತ, ಅಂಕಣಗಾರರಾಗಿದ್ದ ಪ್ರತಾಪ್ ಅವರು 2009ರಲ್ಲಿ ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಕಳೆದ 10 ವರ್ಷಗಳ:ಇಂದ ಸಂಸದರಾಗಿದ್ದರು. ಕಳೆದ 10 ವರ್ಷದಲ್ಲಿ ಮಾಡಿದ್ದ ಭಿವೃದ್ಧಿ ಕಾರ್ಯವನ್ನು ಮುಂದಿಟ್ಟುಕೊಂಡು ಮತ್ತೇ ಮೂರನೇ ಭಾರೀ ಸ್ಪರ್ಧೆಗೆ ತಯಾರಿಯಲ್ಲಿದ್ದರು. ಆದರೆ ಕೊನೆ ಕ್ಷಣದಲ್ಲಿ ಟಿಕೆಟ್ ಕೈತಪ್ಪಿದೆ.