ಹಾಸನ ಜಿಲ್ಲೆಯಲ್ಲಿ ಕಾಡಾನೆ ಹಾವಳಿ ತಡೆಗೆ ಸರ್ಕಾರದ ಗಂಭೀರ ಚಿಂತನೆ

ಸೋಮವಾರ, 14 ನವೆಂಬರ್ 2022 (16:15 IST)
ಜಿಲ್ಲೆಯಲ್ಲಿ ಕಾಡಾನೆ ಹಾವಳಿ ತಡೆಗೆ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವ ಕೆ.ಗೋಪಾಲಯ್ಯ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಡಾನೆ ಹಾವಳಿ ತಡೆ ಸಂಬAಧ ವಿಶೇಷ ತಂಡ ಬಂದು ಈಗಾಗಲೇ ಅಧ್ಯಯನ ಕೂಡ ನಡೆಸಿದೆ. ಈ ವಿಚಾರವನ್ನು ಸಿಎಂ ಈ ವಿಚಾರ ವನ್ನು ಸೂಕ್ಷ್ಮ ವಾಗಿ ಗಮನಿಸುತ್ತಿದ್ದಾರೆ. ತಜ್ಞರ ತಂಡ ವರದಿ ಕೊಟ್ಟ ಬಳಿಕ ಸಿಎಂ ಜೊತೆ ಮತ್ತೆ ಮಾತನಾಡುವುದಾಗಿ ತಿಳಿಸಿದರು.
ಆನೆ ಹಾವಳಿ ತಡೆಗೆ ಏನೆಲ್ಲಾ ಮಾಡಬಹುದು ಎಂದು ಚರ್ಚೆ ಮಾಡಲಾಗುತ್ತೆ. ಒಂದೇ ದಿನಕ್ಕೆ ಎಲ್ಲವನ್ನೂ ಮಾಡಲು ಆಗುವುದಿಲ್ಲ. ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಆನೆಗಳ ಸ್ಥಳಾಂತರದ ಕೆಲಸ ಹಂತ ಹಂತವಾಗಿ ಆಗುತ್ತದೆ ಎಂದರು.
ಮಾಜಿ ಸಿಎಂ ಸಿದ್ದರಾಮಯ್ಯ ರಾಜ್ಯದ ಯಾವುದೇ ಕ್ಷೇತ್ರದಿಂದಲಾದರೂ ಸ್ಫರ್ಧಿಸಲಿ ಆದರೆ  ನಾವು ಎಲ್ಲಿ ಚುನಾವಣೆಯಿಂದ ಗೆದ್ದಿದ್ದೇವೊ ಅಲ್ಲಿಂದಲೇ ಸ್ಪರ್ಧೆ ಮಾಡುತ್ತೇವೆ. ಜನರಿಗೆ ಉತ್ತಮವಾದ ಕೆಲಸ ಮಾಡಿದ್ದರೆ ಜನ ಅಲ್ಲೆ ನಮಗೆ ಮತ ಕೊಡುತ್ತಾರೆ.ಆದರೆ ಸಿದ್ದರಾಮಯ್ಯ ಯಾಕೆ ಅವರು ಕ್ಷೇತ್ರ ಬದಲಾವಣೆ ಮಾಡ್ತಾರೆ ಅವರಿಗೆ ಯಾರ ಭಯ ಇದೆಯೋ ಗೊತ್ತಿಲ್ಲ ಈ ಬಗ್ಗೆ ಅವರೇ ಹೇಳಬೇಕು. ಅವರು ಕೆಲಸ ಮಾಡಿದ್ದೆ ಆಗಿದ್ದರೆ ಬಾದಾಮಿಯಿಂದ ಯಾಕೆ ಸ್ಪರ್ದೆ ಮಾಡ್ತಿಲ್ಲ ಎಂದು ಪ್ರಶ್ನಿಸಿದರು.
ಸೋಲಿನ ಭಯದಿಂದಲೇ ಅವರು ಕ್ಷೇತ್ರ ಹುಡುಕಾಡುತ್ತಿದ್ದಾರೆ. ಚುನಾವಣೆ ಯಲ್ಲಿ ನಾಮಪತ್ರ ಸಲ್ಲಿಸೋ ವೇಳೆಗೆ ಯಾವ ಕ್ಷೇತ್ರ ಹುಡುಕುತ್ತಾರೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದ ಗೋಪಾಲಯ್ಯ, ಆಪರೇಷನ್ ಕಮಲದಿಂದ ಬಿಜೆಪಿ ಸೇರಿದ ಹಲವು ನಾಯಕರು ಮರಳಿ ಕಾಂಗ್ರೆಸ್ ಹೋಗುವ ಪ್ರಶ್ನೇಯೆ ಇಲ್ಲ ಎಂದು ಉತ್ತರಿಸಿದರು.
ಇನ್ನು ಕೆಂಪೇಗೌಡರ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಆಹ್ವಾನ ಮಾಡಿಲ್ಲ ಎನ್ನುವ ಕುರಿತ ಜೆಡಿಎಸ್ ನಾಯಕರ ಆಕ್ಷೇಪ ಕುರಿತ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವರು, ದೇವೇಗೌಡರು ಹಿರಿಯ ನಾಯಕರು ಅವರನ್ನು ಖುದ್ದು ಸಿಎಂ ಅವರೆ ಫೋನ್ ಮಾಡಿ ಆಹ್ವಾನ ಮಾಡಿದ್ದಾರೆ. ಈಗ ಕಾರ್ಯಕ್ರಮವೂ ಮುಗಿದಿದೆ, ಇದರ ಬಗ್ಗೆ ಈಗ ಏನೂ ಪ್ರತಿಕ್ರಿಯೆ ನೀಡುವುದಿಲ್ಲ.ದೇವೇಗೌಡರ ಬಗ್ಗೆ ನಮಗೆ ದೊಡ್ಡ ಗೌರವ ಇದೆ ಏನಾದರು ವಿಚಾರ ಇದ್ದರೆ ಅದನ್ನು ಸರಿಪಡಿಸೋ ಕೆಲಸ ಮಾಡೋಣ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ