‘ನನ್ನ ವಿರುದ್ಧ ಸ್ಪರ್ಧಿಸಲು ರೇವಣ್ಣಂಗೆ ಮೀಟರ್ ಇದ್ಯಾ?’

ಸೋಮವಾರ, 9 ಅಕ್ಟೋಬರ್ 2017 (08:50 IST)
ಬೆಂಗಳೂರು: ತಮ್ಮ ಮೇಲೆ ಹರಿಹಾಯ್ದಿರುವ ಜೆಡಿಎಸ್ ನಾಯಕ ಎಚ್ ಡಿ ರೇವಣ್ಣ ವಿರುದ್ಧ ವಾಗ್ದಾಳಿ ನಡೆಸಿರುವ ಬಂಡಾಯ ಶಾಸಕ ಜಮೀರ್ ಅಹಮ್ಮದ್ ತಮ್ಮ ವಿರುದ್ಧ ಸ್ಪರ್ಧಿಸಲು ರೇವಣ್ಣಗೆ ಮೀಟರ್ ಇದ್ಯಾ ಎಂದು ಪ್ರಶ್ನಿಸಿದ್ದಾರೆ.

 
ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಮೀರ್ ಅಹಮ್ಮದ್, ‘ಎಚ್ ಡಿ ರೇವಣ್ಣಗೆ ನಾನು ಬಹಿರಂಗವಾಗಿ ಸವಾಲು ಹಾಕುತ್ತಿದ್ದೇನೆ. ಅವರಿಗೆ ಮೀಟರ್ ಇದ್ದರೆ ನನ್ನ ವಿರುದ್ಧ ಸ್ಪರ್ಧಿಸಲಿ’ ಎಂದು ಸವಾಲು ಹಾಕಿದ್ದಾರೆ.

ನನ್ನ ವಿರುದ್ಧ ಆರ್ ವಿ ದೇವರಾಜುಗೆ ಟೋಪಿ ಹಾಕಿದ ಮನುಷ್ಯ ಎನ್ನುವ ರೇವಣ್ಣ 2006 ರಲ್ಲಿ ತಮ್ಮ ಸ್ವಂತ ಸಹೋದರನಿಗೆ ಟೋಪಿ ಹಾಕಿದವರು ಎಂದು ಜಮೀರ್ ತಿರುಗೇಟು ನೀಡಿದ್ದಾರೆ. ಬಳಿಕ ದೇವೇಗೌಡರಿಗೇ ಟೋಪಿ ಹಾಕಿ ಮಂತ್ರಿಯಾದವರು ಎಂದು ಜಮೀರ್ ಆರೋಪಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ