ಸಿದ್ದರಾಮಯ್ಯ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಜಮೀರ್ ಅಹ್ಮದ್ ತಮಗೂ ಮುಂದೆ ಸಿಎಂ ಆಗಬೇಕೆಂಬ ಆಸೆಯಿದೆ ಎಂದಿದ್ದಾರೆ. ರಾಜ್ಯ ಸರ್ಕಾರದಲ್ಲಿ ಸಿಎಂ ಬದಲಾವಣೆ ವಿಚಾರ, ಕೆಲವು ಹಿರಿಯ ನಾಯಕರು ಸಿಎಂ ಆಗಬೇಕೆಂದು ಬಯಸುತ್ತಿರುವುದರ ಬಗ್ಗೆ ಪ್ರತಿಕ್ರಿಯಿಸಿದ ಅವರು ನನಗೂ ಆಸೆಯಿದೆ ಎಂದಿದ್ದಾರೆ.
ನಿನ್ನೆಯಷ್ಟೇ ಕಾಂಗ್ರೆಸ್ ಹಿರಿಯ ನಾಯಕ ಆರ್ ವಿ ದೇಶಪಾಂಡೆ ನನಗೂ ಸಿಎಂ ಆಗಬೇಕೆಂಬ ಆಸೆಯಿದೆ ಎಂದಿದ್ದರು. ಇದರ ಬಗ್ಗೆ ಪ್ರತಿಕ್ರಿಯಿಸಿದ ಜಮೀರ್ ಅಹ್ಮದ್ ಅವರು ಹಿರಿಯ ನಾಯಕರು. ಐದೋ ಆರೋ ಬಾರಿ ಶಾಸಕರಾಗಿ ಗೆದ್ದು ಬಂದವರು. ನನಗೆ ಆಸೆಯಿದೆ ಎಂದಿದ್ದಾರೆ. ಸಿಎಂ ಆಗಬೇಕೆಂದು ಯಾರಿಗೆ ಆಸೆ ಇರಲ್ಲ ಹೇಳಿ? ನನಗೂ ಇಲ್ವಾ? ನಿಮಗೂ ಅವಕಾಶ ಕೊಟ್ಟರೆ ಸಿಎಂ ಆಗಬೇಕೆಂಬ ಆಸೆಯಿರಲ್ವಾ? ಅದೇ ರೀತಿ ಅವರೂ ಆಸೆ ಹೇಳಿಕೊಂಡಿದ್ದಾರೆ ಎಂದಿದ್ದಾರೆ.