ವಾರಂತ್ಯದಲ್ಲಿ ಸುದೀರ್ಘ ರಜೆಯಿದ್ದರೆ ಕೆಎಸ್ ಆರ್ ಟಿಸಿ, ಖಾಸಗಿ ಬಸ್ ಗಳಿಗೆ ಬೇಡಿಕೆ ಹೆಚ್ಚುತ್ತದೆ. ಇದೀಗ ಅದೇ ಪರಿಸ್ಥಿತಿಯಾಗಿದೆ. ಚೌತಿ ಹಬ್ಬಕ್ಕೆ ಊರಿಗೆ ಹೋಗಲು ಸಾಕಷ್ಟು ಜನ ತುದಿಗಾಲಲ್ಲಿ ನಿಂತಿದ್ದರು. ಆದರೆ ಊರಿಗೆ ಹೋಗಲು ತಯಾರಾಗಿರುವವರಿಗೆ ಬಸ್ ಟಿಕೆಟ್ ದರ ಶಾಕ್ ನೀಡಿದೆ.
ಬೆಂಗಳೂರಿನಿಂದ ಮಂಗಳೂರು, ವಿಜಯಪುರಕ್ಕೆ 700 ರೂ. ಬಸ್ ಟಿಕೆಟ್ ದರವಿದ್ದರೆ ಈಗ 1400-1500 ರೂ.ವರೆಗೆ ತಲುಪಿದೆ. ಹುಬ್ಬಳ್ಳಿ ಕಡೆಗೆ 900 ರೂ.ಗಳಿದ್ದಟಿಕೆಟ್ ದರ 1300 ರೂ. ದಾಟಿದೆ. ಕೆಎಸ್ ಆರ್ ಟಿಸಿ ಕೂಡಾ ಸಾಮಾನ್ಯ ದಿನಗಳಿಗಿಂತ ಹೆಚ್ಚು ದರ ವಸೂಲಿ ಮಾಡುತ್ತಿವೆ. ಆದರೆ ಖಾಸಗಿ ಬಸ್ ಗಳಷ್ಟು ದುಬಾರಿಯಲ್ಲ ಎನ್ನಬಹುದು. ಆದರೂ ಗಣೇಶ ಹಬ್ಬಕ್ಕೆ ಊರಿಗೆ ಹೋಗುವವರಿಗೆ ಟಿಕೆಟ್ ದರ ನೋಡಿಯೇ ಹಿಂಜರಿಯುವಂತಾಗಿದೆ.