ಇಂದು ಕಂದಾಯ ಇಲಾಖೆ, ವಕ್ಫ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ ರೈತರ ಪಹಣಿಯಲ್ಲಿ ವಕ್ಫ್ ನಮೂದಾಗಿರುವುದನ್ನು ಹಿಂಪಡೆಯಲು ಖಡಕ್ ಸೂಚನೆ ನೀಡಿದ್ದಾರೆ. ಇದರ ಬೆನ್ನಲ್ಲೇ ವಕ್ಫ್ ಸಚಿವ ಜಮೀರ್ ಅಹ್ಮದ್ ಪ್ರತಿಕ್ರಿಯಿಸಿದ್ದು, ನಾವು ಈ ಮೊದಲಿನಿಂದಲೂ ಹೇಳುತ್ತಾ ಬಂದಿದ್ದೇವೆ. ರೈತರ ಜಮೀನನ್ನು ಯಾವುದೇ ಕಾರಣಕ್ಕೂ ಕಿತ್ತುಕೊಳ್ಳಲ್ಲ. ಅದರಂತೆ ಈವತ್ತು ಸಿಎಂ ಸಾಹೇಬ್ರು ಆದೇಶ ಕೊಟ್ಟಿದ್ದಾರೆ ಎಂದಿದ್ದಾರೆ.
ಸಾಮಾನ್ಯ ಜನರ ಆಸ್ತಿಯನ್ನು ಹಾಗೆಲ್ಲಾ ಕಬಳಿಸಲು ಸಾಧ್ಯವಿಲ್ಲ. ಏನೋ ತಪ್ಪಾಗಿರಬಹುದು. ಕಾಂಗ್ರೆಸ್ ಅವಧಿ ಮಾತ್ರವಲ್ಲ, ಬಿಜೆಪಿ ಅವಧಿಯಲ್ಲಿ ನೋಟಿಫಿಕೇಷನ್ ಆದ ರೈತರ ಜಮೀನುಗಳ ವಿಚಾರವಾಗಿಯೂ ಎಲ್ಲಾ ನೋಟಿಫಿಕೇಷನ್ ಗಳನ್ನು ಸದ್ಯಕ್ಕೆ ಸ್ಟಾಪ್ ಮಾಡ್ತೀವಿ. ಮುಂದೆ ಚುನಾವಣೆ ಮುಗಿಯಲಿ. ಆ ಬಳಿಕ ಎಲ್ಲವನ್ನೂ ರಿವ್ಯೂ ಮಾಡಿ ಮುಂದುವರಿಯಲಿದ್ದೇವೆ ಎಂದಿದ್ದಾರೆ.