ಪಾದರಾಯನಪುರ ಪ್ರಕರಣದ ನಂತರ ಬುದ್ದಿ ಕಲಿತ ಶಾಸಕ ಜಮೀರ್ ಅಹಮ್ಮದ್

ಬುಧವಾರ, 22 ಏಪ್ರಿಲ್ 2020 (11:18 IST)

ಬೆಂಗಳೂರು : ಪಾದರಾಯನಪುರ ಪ್ರಕರಣದ ನಂತರ ಶಂಕಿತರ ಪರವಾಗಿ ನಿಂತ ಶಾಸಕ ಜಮೀರ್ ಅಹಮ್ಮದ್ ಇದೀಗ ಬುದ್ದಿ ಕಲಿತಿದ್ದಾರೆ ಎನ್ನಲಾಗಿದೆ.

 

ಇದಕ್ಕೆ ಕಾರಣವೆನೆಂದರೆ ಪಾದರಾಯನಪುರದಲ್ಲಿನ 38 ಕೊರೊನಾ ಶಂಕಿತರನ್ನು ಹೋಟೆಲ್ ಕ್ವಾರಂಟೈನ್ ನಲ್ಲಿಡಲಾಗಿದೆ. ಆದರೆ ನಮಗೆ ಹೋಟೆಲ್ ಬೇಡ ಹಜ್ ಭವನಕ್ಕೆ ಶಿಫ್ಟ್ ಮಾಡಿ ಎಂದು ಶಂಕಿತರು ಶಾಸಕ ಜಮೀರ್ ಅಹಮ್ಮದ್ ಗೆ ಮನವಿ ಮಾಡಿದ್ದಾರೆ.

 

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಜಮೀರ್ ಅಹಮ್ಮದ್, ಸಮಸ್ಯೆ ಇದ್ರೆ ಅಧಿಕಾರಿಗಳ ಜತೆ ಚರ್ಚಿಸಿ. ಈ ವಿಚಾರದಲ್ಲಿ ನಾನು ಮಧ್ಯಪ್ರವೇಶಿಸಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ