ಕೇಂದ್ರ ಸರ್ಕಾರ ವಿರುದ್ದ ರೈತರ ಪ್ರತಿಭಟನೆ
ನವದೆಹಲಿ : ಸೋಮವಾರ ಸಂಜೆ ರೈತನಾಯಕರು ಐದು ತಾಸುಗಳ ಬೃಹತ್ ಸಭೆ ನಡೆಸಿದ್ದರು. ಪಂಜಾಬ್ ಮತ್ತು ಹರ್ಯಾಣಾ ರೈತರಿಗೆ ಚಿತ್ರಹಿಂಸೆ ನೀಡಲಾಗುತ್ತಿದೆ. ಅವರನ್ನು ಭಾರತದ ಭಾಗವಲ್ಲ ಎಂಬಂತೆ ನಡೆಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿರುವ ರೈತ ಮುಖಂಡರು ಇಂದು ದೆಹಲಿ ಚಲೋಗೆ ಮುಂದಾಗಿದ್ದಾರೆ. ಕೇಂದ್ರ ಸರ್ಕಾರ ವಿರುದ್ದ ರೈತರು ಇಂದು ಪ್ರತಿಭಟನೆ ಹಮ್ಮಿಕೊಂಡಿದ್ದು ದೆಹಲಿ ಚಲೋ ಹೆಸರಿನಲ್ಲಿ ರಾಜಧಾನಿಗೆ ಮುತ್ತಿಗೆ ಹಾಕಲಿದ್ದಾರೆ. ರೈತರ ಪ್ರತಿಭಟನೆಯನ್ನು ಎದುರಿಸಲು ಸರ್ಕಾರ ಕ್ರಮ ಕೈಗೊಂಡಿದ್ದು, ಇಡೀ ದೆಹಲಿಯಲ್ಲಿ ನಿಷೇಧಾಜ್ಞೆ ವಿಧಿಸಿರುವುದಲ್ಲದೇ ಕಠಿಣ ಬಂದೋಬಸ್ತ್ ಜಾರಿಗೊಳಿಸಿದೆ.
ಸಫ್ದರ್ ಜಂಗ್, ಗಾಝಿಪುರ್ ಗಡಿ ಮುಂತಾದೆಡೆ ಈಗಾಗಲೇ ರೈತರ ಮೆರವಣಿಗೆಯಿಂದಾಗಿ ವಾಹನ ದಟ್ಟಣೆ ಉಂಟಾಗತೊಡಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಪಂಜಾಬ್ ಕಿಸಾನ್ ಮಜ್ದೂರ್ ಸಂಘರ್ಷ ಕಮಿಟಿ ಕಾರ್ಯದರ್ಶಿ ಸರ್ವನ್ ಸಿಂಗ್, ನಾವು ಸರ್ಕಾರದ ವಿರುದ್ದವಾಗಿಲ್ಲ.ನಾವು ಬಯಸುತ್ತಿರುವುದು ಕೊಂಚ ನೆರವು ಅಷ್ಟೇ ಎಂದಿದ್ದಾರೆ. ಸೋಮವಾರ ಸಂಜೆ ರೈತನಾಯಕರು ಐದು ತಾಸುಗಳ ಬೃಹತ್ ಸಭೆ ನಡೆಸಿದ್ದರು.